Home » UG-NEET: ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಹತ್ವ ಸೂಚನೆ ನೀಡಿರುವ ಕೆಇಎ!

UG-NEET: ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಹತ್ವ ಸೂಚನೆ ನೀಡಿರುವ ಕೆಇಎ!

0 comments
NEET 2024 Re exam

UG -NEET: ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಹತ್ವ ಸೂಚನೆ ಒಂದನ್ನು ಕೆಇಎ ನೀಡಿದೆ. ಈಗಾಗಲೇ ಯುಜಿನೀಟ್-24 (UGNEET) ಮಾಪ್ ಅಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು (Medical Seat) ಹಂಚಿಕೆಯಾಗಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಜೊತೆಗೆ ಸಂಬಂಧಪಟ್ಟ ಕಾಲೇಜುಗಳಿಗೇ ಹೋಗಿ ವರದಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.

ಸದ್ಯ ವೈದ್ಯಕೀಯ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ದಾಖಲೆ ಸಲ್ಲಿಸಲು ಅ.21ರಂದು ಕೆಇಎ ಕಚೇರಿಗೆ ಬರುವ ಅಗತ್ಯ ಇಲ್ಲ. ಶುಲ್ಕ ಪಾವತಿ ಮಾಡುವುದಕ್ಕೆ ಮತ್ತು ಕಾಲೇಜಿಗೆ ದಾಖಲೆ ಸಲ್ಲಿಸಿ ವರದಿ‌ ಮಾಡಿಕೊಳ್ಳಲು ಅ. 22ರ ವರೆಗೂ ಅವಕಾಶ‌ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment