Home » Chaitra Kundapura Marriage: ‘ನಾನು ಮದುವೆ ಫಿಕ್ಸ್ ಮಾಡ್ಕಂಡು ಬಂದಿದ್ದೀನಿ.. ಕ್ಯಾರೆಕ್ಟರ್ ವಿಷ್ಯಕ್ಕೆ ಬಂದ್ರೆ ಮೆಟ್ಟು ಕಾಲಲ್ಲಿ ಇರಲ್ಲ’ ಚೈತ್ರಾ ಕುಂದಾಪುರ ಆವಾಜ್!

Chaitra Kundapura Marriage: ‘ನಾನು ಮದುವೆ ಫಿಕ್ಸ್ ಮಾಡ್ಕಂಡು ಬಂದಿದ್ದೀನಿ.. ಕ್ಯಾರೆಕ್ಟರ್ ವಿಷ್ಯಕ್ಕೆ ಬಂದ್ರೆ ಮೆಟ್ಟು ಕಾಲಲ್ಲಿ ಇರಲ್ಲ’ ಚೈತ್ರಾ ಕುಂದಾಪುರ ಆವಾಜ್!

2 comments

Chaitra Kundapura Marriage: ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಆರಂಭವಾಗಿ 3 ವಾರ ಕಳೆದಿದ್ದು ಈ ಮನೆಯೊಳಗೇ ಇದೀಗ ಒಬ್ಬರಿಗೊಬ್ಬರು ಯಾರು ಹೇಗೆ ಅನ್ನೋ ಅವರ ಕ್ಯಾರೆಕ್ಟರ್ ಬಗ್ಗೆ ಊಹಿಸಬಲ್ಲರು.
ಆದ್ರೆ ಎಷ್ಟೇ ನಾಜುಕಾಗಿ ಇದ್ರು ಕ್ಯಾರೆಕ್ಟರ್ ವಿಷ್ಯಕ್ಕೆ ಬಂದ್ರೆ ‘ಬಿಗ್ ಬಾಸ್‌’ ಮನೆಯಲ್ಲಿ ಪ್ರತಿಯೊಬ್ಬರೂ ಯರ್ರಾ ಬಿರ್ರಿ ರಿಯಾಕ್ಟ್ ಮಾಡುತ್ತಾರೆ. ಅದರಲ್ಲೂ ಮಾತಿನ ಗರಗಸ ಚೈತ್ರ ಕುಂದಾಪಾರ ವಿಷ್ಯಕ್ಕೆ ಹೋದವರ ಕಥೆ ಮುಗಿತು.

ಸದ್ಯ ಇದೀಗ ರಿಲೇಷನ್‌ಶಿಪ್‌ ಗಾಸಿಪ್ ಬಗ್ಗೆ ಚೈತ್ರಾ ಕುಂದಾಪುರ ಮಾತನಾಡಿದ್ದಾರೆ. ‘ಬಿಗ್ ಬಾಸ್‌’ ಶೋಗೆ ಕಾಲಿಡುವುದಕ್ಕೂ ಮುನ್ನ ಅವರು ಆಗಲೇ ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದಾರಂತೆ! ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ಫೈರ್ ಬ್ರ್ಯಾಂಡ್ ಭಾಷಣಕಾರ್ತಿ ಎಂದೇ ಫೇಮಸ್ ಆಗಿರುವ ಚೈತ್ರಾ ಕುಂದಾಪುರ (Chaitra Kundapura Marriage) ‘ಬಿಗ್ ಬಾಸ್‌’ ಮನೆಯಲ್ಲಿ ಹೊಸ ಹೊಸ ವರಸೆಗಳನ್ನು ತೋರಿಸುತ್ತಿದ್ದಾರೆ. ಕಳೆದ ವಾರದ ವೀಕೆಂಡ್ ಸಂಚಿಕೆಯಲ್ಲಿ ಕೆಲವು ಪದಬಳಕೆಯ ವಿಚಾರವಾಗಿ ‘ಕಿಚ್ಚ’ ಸುದೀಪ್ ಅವರು ಸರಿಯಾಗಿಯೇ ಚೈತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಖಡಕ್ ಆಗಿ ಮಾತನಾಡಿದ್ದಾರೆ.

‘ಬಿಗ್ ಬಾಸ್’ ಮನೆಯ ಬೆಡ್‌ ರೂಮ್ ಏರಿಯಾದಲ್ಲಿ ಚೈತ್ರಾ ಕುಂದಾಪುರ, ಹಂಸ ಮತ್ತು ಮಾನಸಾ ಇದ್ದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಳ್ಳುವ ಲವ್ ಸ್ಟೋರಿಗಳ ಬಗ್ಗೆ ಚರ್ಚೆ ಶುರುವಾಯಿತು. ಆಗ ಮಾತಿನ ಮಧ್ಯೆ ಚೈತ್ರಾ, “ಮೆಟ್ಟು ತಗೊಂಡು ಹೊಡಿತೀನಿ ನಾನು. ಹೊರಗೆ ಹೋದರೂ ತೊಂದರೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ ಅಂತ ನಾನು ಮೊದಲೇ ಹೇಳಿದ್ದೇನೆ” ಎಂದು ತಿಳಿಸಿದರು.

ಸಂಭಾಷಣೆ ಯಲ್ಲಿ, ಮೆಟ್ಟು ತಗೊಂಡು ಹೊಡಿತೀನಿ ನಾನು, ಹೊರಗೆ ಹೋದರೂ ತೊಂದರೆ ಇಲ್ಲ. ಹೊಡೆದೇ ಹೋಗ್ತೀನಿ. ನನ್ನ ಸುದ್ದಿಗೆ ಬಂದ್ರೆ ಯಾರನ್ನೂ ಬಿಡೋದಿಲ್ಲ. ನನ್ನ ಕ್ಯಾರೆಕ್ಟರ್ ವಿಷಯಕ್ಕೆ ಯಾವನೂ ಕಳಂಕ ಹಾಕೋದಕ್ಕೆ ನಾನು ಬಿಡುವುದಿಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೀನಿ. ಯಾರೊಟ್ಟಿಗೂ ಸಂಬಂಧ ಕಟ್ಟುವುದು ಇಟ್ಕೊಳ್ಳಲೇ ಬೇಡಿ ಅಂತ ನಾನು ಮೊದಲೇ ಹೇಳಿದ್ದೀನಿ ಅಂದಿದ್ದಾರೆ.
ಈ ರೀತಿ ಚೈತ್ರಾ ಮತ್ತು ಹಂಸ ನಡುವೆ ಮಾತುಕತೆ ನಡೆಯಿತು. ಇಲ್ಲಿ ತಮಗೆ ಫಿಕ್ಸ್ ಆಗಿದೆ ಎಂಬ ವಿಚಾರವನ್ನೇನೋ ಚೈತ್ರಾ ಬಹಿರಂಗ ಪಡಿಸಿದರು. ಆದ್ರೆ ಯಾರು ಆ ಹುಡುಗ ಅಂತಾ ಸಮಯವೇ ಉತ್ತರ ಕೊಡಬೇಕಿದೆ.

You may also like

Leave a Comment