Home » Russian Girl: ರಷ್ಯಾದ ಯುವತಿಗೆ ಭಾರತೀಯ ವರ ಬೇಕಾಗಿದ್ದಾನೆ! ಜೆಸ್ಟ್ ಈ ಕಂಡೀಷನ್ ಗೆ ಓಕೆ ಅಂದ್ರೆ ನಿಮ್ಮ ಮ್ಯಾರೇಜ್ ಇವತ್ತೇ ಫಿಕ್ಸ್

Russian Girl: ರಷ್ಯಾದ ಯುವತಿಗೆ ಭಾರತೀಯ ವರ ಬೇಕಾಗಿದ್ದಾನೆ! ಜೆಸ್ಟ್ ಈ ಕಂಡೀಷನ್ ಗೆ ಓಕೆ ಅಂದ್ರೆ ನಿಮ್ಮ ಮ್ಯಾರೇಜ್ ಇವತ್ತೇ ಫಿಕ್ಸ್

0 comments

Russian Girl: ರಷ್ಯಾದ ಹುಡುಗಿಯೊಬ್ಬಳು (Russian Girl) , ಭಾರತೀಯ ಸಂಸ್ಕೃತಿಯನ್ನು ಮತ್ತು ದೇಶವನ್ನು ಇಷ್ಟಪಟ್ಟು, ತನಗಾಗಿ ಭಾರತೀಯ ಹುಡುಗನನ್ನು ಹುಡುಕುತ್ತಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣಲ್ಲಿ ಈಕೆ ಹಾಕಿರುವ ಕಂಡಿಶನ್​ ವಿಡಿಯೋ ಸಖತ್​ ವೈರಲ್​ ಆಗಿದೆ.

https://www.instagram.com/reel/DBQZ-Nsz23i/?igsh=MTdvY3ZxMXo4OXFqbQ==

https://www.instagram.com/reel/DBQZ-Nsz23i/?igsh=MTdvY3ZxMXo4OXFqbQ=

ಹೌದು, ನೆಲ್ಲಿ ಎಂಬ ರಷ್ಯಾದ ಹುಡುಗಿ ಇನ್‌ಸ್ಟಾ ಪ್ರೊಫೈಲ್ ಪ್ರಕಾರ ಈಗ ದುಬೈನಲ್ಲಿ ವಾಸಿಸುತ್ತಿದ್ದಾಳೆ. ಅಕ್ಟೋಬರ್ 18 ರಂದು, ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತನಗಾಗಿ ಭಾರತೀಯ ವರನನ್ನು ಹುಡುಕುತ್ತಿರುವುದಾಗಿ ಹೇಳುವುದನ್ನು ಕೇಳಬಹುದು. ಆದರೆ ರಷ್ಯಾದ ಹುಡುಗಿಯ ಷರತ್ತುಗಳನ್ನು ಕೇಳಿದ ತಕ್ಷಣ ನನಗೆ ನೀನು ಬೇಡ ಎಂದು ಹೇಳಿ ಕಾಮೆಂಟ್​​ ಮಾಡುತ್ತಿದ್ದಾರೆ. ಹಾಗಿದ್ರೆ ರಷ್ಯಾ ಬೆಡಗಿ ಹಾಕಿರುವ ಷರತ್ತುಗಳು ಏನು ಎಂದು ಇಲ್ಲಿ ನೋಡಿ. ನಿಮಗೆ ಕಂಡೀಷನ್ ಓಕೆ ಅಂದ್ರೆ ನಿಮ್ಮ ಮ್ಯಾರೇಜ್ ಫಿಕ್ಸ್ ಖಂಡಿತಾ.

ನೆಲ್ಲಿ ಎಂಬ ರಷ್ಯಾದ ಹುಡುಗಿಯ ವೀಡಿಯೊ ವೈರಲ್ ಆಗಿದ್ದು, ನಾನು ಭಾರತೀಯ ವರನನ್ನು ಹುಡುಕುತ್ತಿದ್ದೇನೆ. ಹುಡುಗನ ಎತ್ತರ ಆರು ಅಡಿಗಿಂತ ಹೆಚ್ಚಿರಬೇಕು. ಕಣ್ಣುಗಳು ಹಸಿರು ಆಗಿರಬೇಕು. ಆತ ಸಂಗೀತ ಪ್ರೇಮಿಯಾಗಿರಬೇಕು ಮತ್ತು ನೃತ್ಯ ಮಾಡಲು ತಿಳಿದಿರಬೇಕು. ಇನ್ನು , ನೀವು ಪ್ರಯಾಣವನ್ನು ಇಷ್ಟಪಡಬೇಕು. ಮುಖ್ಯವಾಗಿ ನನ್ನನ್ನು ಅಪಾರವಾಗಿ ಪ್ರೀತಿಸಬೇಕು, ಜೊತೆಗೆ ಅವನು ರಷ್ಯಾವನ್ನು ಪ್ರೀತಿಸಬೇಕು ಎಂದು ಅವರು ಅಕ್ಟೋಬರ್ 18 ರಂದು ತಮ್ಮ Insta ಖಾತೆ @girl_white_indian ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈಕೆಗೆ ಕಾಮೆಂಟ್ ಗಳ ಸುರಿಮಳೆಯೇ ಬಂದಿದೆ. ಆದ್ರೆ ಒಂದಲ್ಲ ಒಂದು ಕಂಡೀಷನ್ ಭಾರತೀಯ ಹುಡುಗನಿಗೆ ಒಪ್ಪಿಕೊಳ್ಳೋಕೆ ಆಗ್ತಾ ಇಲ್ಲ ಅನ್ನೋದೇ ಚಿಂತೆ ಆಗಿದೆ.

You may also like

Leave a Comment