Home » Walking Tips: ಬೆಳಿಗ್ಗೆ ಅಥವಾ ಸಂಜೆಯ ವಾಕಿಂಗ್ ಅಲ್ಲಿ ಯಾವುದು ಬೆಸ್ಟ್? ವಿಜ್ಞಾನ ಏನು ಹೇಳುತ್ತೆ?

Walking Tips: ಬೆಳಿಗ್ಗೆ ಅಥವಾ ಸಂಜೆಯ ವಾಕಿಂಗ್ ಅಲ್ಲಿ ಯಾವುದು ಬೆಸ್ಟ್? ವಿಜ್ಞಾನ ಏನು ಹೇಳುತ್ತೆ?

252 comments

Walking Tips: ವಾಕಿಂಗ್ ಮಾಡೋದ್ರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ವೈದ್ಯರೂ ಕೂಡ ವಾಕಿಂಗ್ ಮಾಡಲು ಸಲಹೆ ನೀಡುತ್ತಾರೆ. ಕೆಲವರು ಸಣ್ಣಗಾಗಲು ವಾಕಿಂಗ್ ಮಾಡಿದರೆ ಇನ್ನು ಕೆಲವರು ಆರೋಗ್ಯವನ್ನು ಸಧಾರಿಸಲು, ಚೆನ್ನಾಗಿಟ್ಟುಕೊಳ್ಳಲು ವಾಕ್(Walk) ಮಾಡುತ್ತಾರೆ.

ಇಷ್ಟೇ ಅಲ್ಲದೆ ಕೆಲವರು ಬೆಳಗ್ಗೆ ಮಾತ್ರ ವಾಕ್ ಮಾಡಿದರೆ ಮತ್ತೆ ಕೆಲವರು ಸಂಜೆ ವೇಳೆ ವಾಕ್ ಮಾಡುತ್ತಾರೆ. ಇನ್ನು ಕೆಲವರು ಬೆಳಗ್ಗೆ, ಸಂಜೆ ಎರಡು ಹೊತ್ತು ವಾಕ್ ಮಾಡುತ್ತಾರೆ. ಹಾಗಿದ್ರೆ ಬೆಳಿಗ್ಗೆ ಅಥವಾ ಸಂಜೆಯ ವಾಕಿಂಗ್ ಅಲ್ಲಿ ಯಾವುದು ಬೆಸ್ಟ್ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ವಾಕಿಂಗ್ ಗೆ ಯಾಶ ಸಮಯ ಉತ್ತಮ.?
ಬೆಳಿಗ್ಗೆ ವಾಕಿಂಗ್(Morning Walk).. ಸಂಜೆ ವಾಕಿಂಗ್(Evening Walk) ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ತರುತ್ತದೆ. ಆದ್ದರಿಂದ ನಿಮಗೆ ಯಾವ ಸಮಯ ಸೂಕ್ತವಾಗಿದೆ ಎಂದು ನೀವು ಮ ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಹವಾಮಾನವು ಯಾವ ಸಮಯದಲ್ಲಿ ಅನುಕೂಲಕರವಾಗಿದೆ ಎಂದು ನೋಡಿ ನೀವು ನಡೆದರೆ ಯಾವುದೇ ತೊಂದರೆಗಳು ಇರುವುದಿಲ್ಲ. ಆದ್ದರಿಂದ ಇದನ್ನು ವೈಯಕ್ತಿಕ ಸಮಯಕ್ಕೆ ಅನುಗುಣವಾಗಿ ಯೋಜಿಸಬಹುದು.

ನೀವು ನಡೆಯಲು ಬಯಸಿದರೆ, ಮೊದಲ ದಿನ, ಹೆಚ್ಚು ನಡೆದ್ರೆ ನಂತರ ಅದನ್ನು ಕಡಿಮೆ ಮಾಡುವ ಬದಲು ನೀವು ಪ್ರತಿದಿನ ಒಂದು ಹೆಜ್ಜೆ ದೂರ ಹೋಗಲು ಯೋಜಿಸಬೇಕು. ಇದು ನಿಮಗೆ ಅಭ್ಯಾಸವಾಗಿದ್ದರೆ, ಅದರ ನಂತ್ರ ದೂರವನ್ನ ಹೆಚ್ಚಿಸಬಹುದು. ನಿಮ್ಮ ದೇಹ ಏನು ಹೇಳುತ್ತದೆ ಎಂಬುದನ್ನ ಆಲಿಸಿ. ಅದು ದಣಿದಿದ್ದಾಗ ಅದನ್ನು ಕೇಳಿ ವಿಶ್ರಾಂತಿ ಕೊಡಿ. ಬಲವಂತವಾಗಿ ನಡೆದರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಅಲ್ಲದೆ, ನಿಮ್ಮ ಜೀವನಶೈಲಿ, ದೇಹ ಮತ್ತು ಸಮಯ ಏನು ಎಂದು ನಿಮಗೆ ತಿಳಿದಿಲ್ಲದಿದ್ದರೆ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ಯೋಜಿಸಿ.

You may also like

Leave a Comment