6
Surathkal: ಸುರತ್ಕಲ್ ಇಡ್ಯಾ ನಿವಾಸಿಯೋರ್ವ ತನ್ನ ಮನೆ ಸಮೀಪದಲ್ಲೇ ವಾಸಿಸುವ ಯುವತಿಯೋರ್ವಳಿಗೆ ವಾಟ್ಸಪ್ ಮೆಸೇಜ್ ಮಾಡಿರುವ ಕುರಿತು ವರದಿಯಾಗಿದೆ. ನನ್ನ ಜೊತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ ಎಂದು ಮೆಸೇಜ್ ಮಾಡಿದ್ದಾನೆ.
ಸುರತ್ಕಲ್ ಇಡ್ಯಾ ನಿವಾಸಿ ಸದಾಶಿವನಗರದ ಶಾರಿಕ್ ನೂರ್ಜಹಾನ್ ಮೆಸೇಜ್ ಮಾಡಿರುವ ಆರೋಪಿ ಎಂದು ತಿಳಿದು ಬಂದಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಸುರತ್ಕಲ್ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.
ಯುವತಿಯ ಸಹೋದರನಿಗೆ ವಾಟ್ಸಪ್ ಮೆಸೇಜ್ ಮಾಡಿದ ಈತ ಬೆದರಿಕೆ ಹಾಕಿದ್ದು, ಇದರಿಂದ ಕುಟುಂಬ ಆತಂಕಗೊಂಡಿದ್ದು, ಸುರತ್ಕಲ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಯುವಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
