Home » Addanda Karyappa: ‘ಗಾಂಧಿ, ಸಣ್ಣ ಹುಡುಗಿಯರನ್ನ ಬೆತ್ತಲಾಗಿಸಿ, ತಾನೂ ಬೆತ್ತಲಾಗಿ ಮಲಗ್ತಿದ್ರು, ಈಗ ಇದ್ದಿದ್ರೆ ಪೋಕ್ಸೋ ಕೇಸ್ ಆಗ್ತಿತ್ತು’ – ಅಡ್ಡಂಡ ಸಿ.ಕಾರ್ಯಪ್ಪ ಶಾಕಿಂಗ್ ಸ್ಟೇಟ್ಮೆಂಟ್!!

Addanda Karyappa: ‘ಗಾಂಧಿ, ಸಣ್ಣ ಹುಡುಗಿಯರನ್ನ ಬೆತ್ತಲಾಗಿಸಿ, ತಾನೂ ಬೆತ್ತಲಾಗಿ ಮಲಗ್ತಿದ್ರು, ಈಗ ಇದ್ದಿದ್ರೆ ಪೋಕ್ಸೋ ಕೇಸ್ ಆಗ್ತಿತ್ತು’ – ಅಡ್ಡಂಡ ಸಿ.ಕಾರ್ಯಪ್ಪ ಶಾಕಿಂಗ್ ಸ್ಟೇಟ್ಮೆಂಟ್!!

1 comment

Addanda Karyappa: ಹಿರಿಯ ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ(Addanda Karyappa) ರಾಷ್ಟ್ರಪಿತ ಮಹಾತ್ಮ ಗಾಂಧಿ(Mahatma Gandhi) ಅವರು ಬರೆದುಕೊಂಡ ಪುಸ್ತಕದ ಕುರಿತು ಮಾತನಾಡಿದ್ದು, ಅದರಲ್ಲಿರುವ ಕೆಲವು ಶಾಕಿಂಗ್ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ.

ಹೌದು, ಮೈಸೂರಿನಲ್ಲಿ(Mysore) ಶುಕ್ರವಾರ ತಮ್ಮ ‘ಸತ್ಯವನ್ನೇ ಹೇಳುತ್ತೇನೆ’ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದ ಕೊನೆಗೆ ಮಾತನಾಡಿದ ಅವರು ‘ಗಾಂಧೀಜಿ ಸಣ್ಣ ಸಣ್ಣ ಹುಡುಗಿಯರನ್ನು ಬೆತ್ತಲಾಗಿಸಿ, ತಾನೂ ಬೆತ್ತಲಾಗಿ ಅವರೊಂದಿಗೆ ಮಲಗಿಕೊಳ್ಳುತ್ತಿದ್ದುದಾಗಿ ಬರೆದುಕೊಂಡಿದ್ದಾರೆ. ಈಗ ಅವರು ಬದುಕಿದ್ದು, ಆ ಮಾತನ್ನು ಹೇಳಿದ್ದರೆ ಪೋಕ್ಸೋ‌ ಪ್ರಕರಣ ದಾಖಲಾಗುತ್ತಿತ್ತು. ಅಲ್ಲದೆ ಗಾಂಧಿ ಒಬ್ಬ ಸಂತ. ಆತ ಸಂತನಾಗಿದ್ದೇನೆ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ, ತಾನೂ ಬೆತ್ತಲಾಗಬಹುದಿತ್ತೆ’ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ’60 ವರ್ಷಗಳಿಂದ ಮರೆಮಾಚಲಾಗಿದ್ದ ಇಂಥ ಸತ್ಯಗಳನ್ನು ಕೃತಿಯ ಮೂಲಕ ಹೊರತಂದಿದ್ದೇನೆ. ಯುವ ಪೀಳಿಗೆಗೆ ಸತ್ಯ ಏನು ಎಂಬುದನ್ನು ತೋರಿಸಿದ್ದೇನೆ. ಇದರಿಂದ ನನಗೆ ಯಾವುದೇ ಭಯ ಇಲ್ಲ. ಪ್ರಕರಣಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಇದೆಲ್ಲಾ ಒಂದು ರೀತಿಯ ಆಟವಿದ್ದಂತೆ’ ಎಂದರು.

You may also like

Leave a Comment