Home » Bigg Boss Kannada-11: ಬಿಗ್ ಬಾಸ್ ಮನೆಯಿಂದ ಈ ಸ್ಪರ್ಧಿ ಎಲಿಮನೇಟ್ – ಯಾರೂ ಊಹಿಸಲಾಗದ ವ್ಯಕ್ತಿ ದೊಡ್ಮನೆಯಿಂದ ಔಟ್ !!

Bigg Boss Kannada-11: ಬಿಗ್ ಬಾಸ್ ಮನೆಯಿಂದ ಈ ಸ್ಪರ್ಧಿ ಎಲಿಮನೇಟ್ – ಯಾರೂ ಊಹಿಸಲಾಗದ ವ್ಯಕ್ತಿ ದೊಡ್ಮನೆಯಿಂದ ಔಟ್ !!

3 comments

Bigg Boss Kannada-11 ಆಟ ಶುರುವಾಗಿ ನಾಲ್ಕು ವಾರಗಳು ಕಳೆದಿವೆ. 4 ವಾರಗಳಲ್ಲಿ ಹಲವು ಬದಲಾವಣೆಗಳು, ಮಹತ್ವದ ಬೆಳವಣಿಗೆಗಳು ನಡೆದಿವೆ. ಈ ಬೆನ್ನಲ್ಲೇ ನಾಲ್ಕನೇ ವಾರದಲ್ಲಿ ದೊಡ್ಮನೆಯಿಂದ ಊಹಿಸದ ಒಬ್ಬ ಸ್ಪರ್ಧಿ ಎಲಿಮಿನೇಟ್ ಅಗಲಿದ್ದಾರೆ.

ಹೌದು, ಕಿಚ್ಚ ಸುದೀಪ್ (Kiccha Sudeep) ಅವರ ಅನುಪಸ್ಥಿತಿಯಲ್ಲಿ ಈ ವಾರದ ವೀಕೆಂಡ್ ನಡೆಯಲಿದ್ದು, ಒಬ್ಬ ಸ್ಪರ್ಧಿ ಕೂಡ ಎಲಿಮನೇಟ್ ಆಗಿದ್ದಾರೆ. ಈಗಾಗಲೇ ಭವ್ಯ, ಚೈತ್ರ, ಗೌತಮಿ, ಹಂಸ, ಮಂಜು, ಮಾನಸ, ಮೋಕ್ಷಿತಾ, ಶಿಶಿರ್ ಮತ್ತು ಗೋಲ್ಡ್‌ ಸುರೇಶ್ ಈ ವಾರ ಮನೆಯಿಂದ ಆಚೆ ಬರಲು ನಾಮಿನೇಟ್ ಆಗಿದ್ದರು. ಇವರುಗಳ ಪೈಕಿ ಒಬ್ಬರು ಇವತ್ತು ಬಿಗ್ ಬಾಸ್ ಮನೆಯಿಂದ ಅಚೆ ಬರಲಿದ್ದಾರೆ. ಮೂಲಗಳ ಪ್ರಕಾರ ನಾಮಿನೇಟ್ ಆಗಿರುವ ಪೈಕಿ ಮಾನಸ ಅವರಿಗೆ ಅತಿ ಕಡಿಮೆ ವೋಟ್ ಬಿದ್ದಿದ್ದು, ಅವರು ಈ ವಾರ ಮನೆಯಿಂದ ಆಚೆ ಬರಲಿದ್ದಾರೆ ಎನ್ನಲಾಗುತ್ತಿದೆ.

ಅಷ್ಟೇ ಅಲ್ಲದೆ ಕಳೆದ ಕೆಲ ದಿನದಿಂದ ಮಾನಸ(Manasa) ಅವರು ಬಿಗ್ ಬಾಸ್ ಮನೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದಾರೆ. ಅವರು ಮನೆಯಲ್ಲಿ ಯಾವುದರಲ್ಲೂ ಸರಿಯಾಗಿ ಭಾಗಿಯಾಗುತ್ತಿಲ್ಲ. ಇದಕ್ಕಿಂತ ಅವರು ಮನೆಯಿಂದ ಆಚೆ ಬರುವುದೇ ಉತ್ತಮವೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು. ಇದಲ್ಲದೆ ದೊಡ್ಮನೆಯ ಸ್ಪರ್ಧಿಗಳಲ್ಲೂ ಮಾನಸ ಅವರು ದೊಡ್ಡ ಧ್ವನಿಯಲ್ಲಷ್ಟೇ ಮಾತನಾಡುತ್ತಾರೆ. ಯಾವುದರಲ್ಲೂ ಮುಂದೆ ಬರಲ್ಲ ಎನ್ನುವ ಅಭಿಪ್ರಾಯವಿತ್ತು.
ಹೀಗಾಗಿ ಮಾನಸ ಅವರು ದೊಡ್ಮನೆಯಿಂದ ಇವತ್ತು ಆಚೆ ಬರಲಿದ್ದಾರೆ ಎನ್ನಲಾಗಿದೆ.

You may also like

Leave a Comment