Home » Darshan: ರೇಣುಕಾಸ್ವಾಮಿ ಕೊಲೆ ಕೇಸ್‌ ಪ್ರಕರಣ; ನಟ ದರ್ಶನ್‌ ಜಾಮೀನು ಆದೇಶ ನಾಳೆಗೆ ಕಾಯ್ದಿರಿಸಿದ ಹೈಕೋರ್ಟ್‌

Darshan: ರೇಣುಕಾಸ್ವಾಮಿ ಕೊಲೆ ಕೇಸ್‌ ಪ್ರಕರಣ; ನಟ ದರ್ಶನ್‌ ಜಾಮೀನು ಆದೇಶ ನಾಳೆಗೆ ಕಾಯ್ದಿರಿಸಿದ ಹೈಕೋರ್ಟ್‌

0 comments
Actor Darshan

Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದ್ದು, ವಾದ-ಪ್ರತಿವಾದ ನಡೆದಿದ್ದು, ಹೈಕೋರ್ಟ್‌ ನ್ಯಾಯಾಧೀಶರು ಆದೇಶವನ್ನು ಅಕ್ಟೋಬರ್‌ 30 ಕ್ಕೆ ಕಾಯ್ದಿರಿಸಲಾಗಿದೆ.

ನಟ ದರ್ಶನ್‌ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ ವಾದ ಮಾಡಿದ್ದು, ದರ್ಶನ್‌ ಸಮಸ್ಯೆಯನ್ನು ಮುಂದಿಟ್ಟಿದ್ದಾರೆ. ಡಿ.ಕೆ.ಶಿವಕುಮಾರ್‌ಗೆ ಇದ್ದ ಆರೋಗ್ಯ ಸಮಸ್ಯೆಗಿಂತ ಇದು ಬಹಳ ಗಂಭೀರವಾಗಿದ್ದು, ಬೆನ್ನು ಹುರಿಯ ಸಮಸ್ಯೆಯಿಂದ ಕಾಲು ಮರಗಟ್ಟುವಿಕೆ ಆಗುತ್ತಿದ್ದು, ಡಿಸ್ಕ್‌ನಲ್ಲಿ ಆದ ಸಮಸ್ಯೆಯಿಂದ ರಕ್ತ ಪರಿಚಲನೆ ಆಗುತ್ತಿಲ್ಲ. ಇದಕ್ಕೆ ನಾರ್ಮಲ್‌ ಟ್ರೀಟ್‌ಮೆಂಟ್‌ ಆಗಲ್ಲ. ಹಾಗಾಗಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವಾದ ಮಾಡಿದ ವಕೀಲರು, ಈ ಕಾರಣಕ್ಕಾಗಿ ದರ್ಶನ್‌ಗೆ ಜಾಮೀನು ನೀಡಬೇಕು ಎಂದು ವಾದ ಮಂಡನೆ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಡ್ಜ್‌, ವಿಚಾರಣಾಧೀನ ಕೈದಿಗೂ ಉತ್ತಮ ಆರೋಗ್ಯ ಹಕ್ಕಿದೆ. ಚಿಕಿತ್ಸೆ ಪಡೆಯುವುದು ವ್ಯಕ್ತಿಯ ಮೂಲಭೂತ ಹಕ್ಕು ಎಂದು ಹೇಳಿದ್ದು, ನಂತರ ನೀವು ಎಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತೀರಾ ಎಂದು ಜಡ್ಜ್‌ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಿ.ವಿ.ನಾಗೇಶ್‌ ಅವರು ಮೈಸೂರಿನ ಅಪೋಲೋ ಆಸ್ಪತ್ರೆ ಎದು ಹೇಳಿದ್ದಾರೆ.

ಇದೀಗ ಜಾಮೀನು ಮನವಿಯನ್ನು ನಾಳೆಗೆ ಮುಂದೂಡಿದ ಜಡ್ಜ್‌, ಮಧ್ಯಂತರ ಜಾಮೀನು ಸಿಗುವ ನಿರೀಕ್ಷೆ ಇದ್ದು, ನಾಳೆ ಯಾವ ರೀತಿಯ ಆದೇಶ ಬರುತ್ತದೆ ನೋಡಬೇಕಾಗಿದೆ.

You may also like

Leave a Comment