Home » Maharatstra : ಸಮುದ್ರದ ನಡುವೆ ಮೀನುಗಾರರ ನಡುವೆ ಗಲಾಟೆ – ಮೀನುಗಾರರನ್ನು ಕೊಂದು ಬೋಟಿಗೆ ಬೆಂಕಿ ಹಚ್ಚಿ ವಿಕೃತಿ !! ವಿಡಿಯೋ ವೈರಲ್

Maharatstra : ಸಮುದ್ರದ ನಡುವೆ ಮೀನುಗಾರರ ನಡುವೆ ಗಲಾಟೆ – ಮೀನುಗಾರರನ್ನು ಕೊಂದು ಬೋಟಿಗೆ ಬೆಂಕಿ ಹಚ್ಚಿ ವಿಕೃತಿ !! ವಿಡಿಯೋ ವೈರಲ್

0 comments

Maharastra : ಸಮುದ್ರದ ನಡುವಲ್ಲಿ ಮೀನುಗಾರರ ನಡುವೆ ವಾಗ್ವಾದ, ಗಲಾಟೆ ನಡೆದಿದ್ದು ಸಿಟ್ಟಿಗೆದ್ದ ಮೀನುಗಾರರು ಬೋಟ್ ಒಂದರ ಮೀನುಗಾರರನ್ನು ಕೊಂದು ಆ ಬೋಟಿಗೆ ಬೆಂಕಿ ಹಚ್ಚಿರುವಂತಹ ಅಘಾತಕಾರಿ ಘಟನೆ ಎಂದು ಬೆಳಕಿಗೆ ಬಂದಿದೆ.

ಹೌದು, ಅಕ್ಟೋಬರ್ 28ರಂದು ಮಹಾರಾಷ್ಟ್ರದ(Maharastra ) ಸಿಂಧುದುರ್ಗದ ದೇವಗಢದ ಕುಂಕೇಶ್ವರ ಬಳಿಯ ಸಮುದ್ರದಲ್ಲಿ ಮೀನುಗಾರನನ್ನು ಹತ್ಯೆಗೈದು ಬೋಟ್​ಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ನಡೆದಿದೆ. ಮೀನುಗಾರರ ನಡುವೆ ವಾಗ್ವಾದದ ನಂತರ ಕೊಲೆ ನಡೆದಿದೆ ಎನ್ನಲಾಗಿದೆ. ಮೃತರನ್ನು ತಾಂಡೇಲ್ ರವೀಂದ್ರ ನಾಟೇಕರ್ ಎಂದು ಗುರುತಿಸಲಾಗಿದೆ. ಹತ್ತಿರದ ದೋಣಿಗಳು ಮೀನುಗಾರನನ್ನು ಉಳಿಸಲು ಪ್ರಯತ್ನಿಸಿದವು. ಆದರೂ ಏನು ಪ್ರಯೋಜನ ಆಗಲಿಲ್ಲ.

ದೋಣಿಯಲ್ಲಿದ್ದ ಮೀನುಗಾರರು ತಾಂಡೇಲ್ ಅನ್ನು ಕೊಂದು ನಂತರ ದೋಣಿಗೆ ಡೀಸೆಲ್ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ಬೋಟ್ ಕೂಡ ಸಂಪೂರ್ಣವಾಗಿ ಸುಟ್ಟುಹೋಗಿದೆ.

You may also like

Leave a Comment