Home » Actor Darshan: ದರ್ಶನ್‌ ಆಸ್ಪತ್ರೆಗೆ ದಾಖಲು; ಭೇಟಿಯಾಗಲು ಇವರಿಗೆ ಮಾತ್ರ ಅವಕಾಶ

Actor Darshan: ದರ್ಶನ್‌ ಆಸ್ಪತ್ರೆಗೆ ದಾಖಲು; ಭೇಟಿಯಾಗಲು ಇವರಿಗೆ ಮಾತ್ರ ಅವಕಾಶ

0 comments

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಈ ಕಾರಣಕ್ಕೆ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ನೀಡಿದೆ.

ಜಾಮೀನು ದೊರೆತ ನಂತರ ಮೊದಲ ಎರಡು ದಿನ ಮನೆಯಲ್ಲಿ ಇದ್ದ ನಟ ದರ್ಶನ್‌, ಮೂರನೇ ದಿನ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹಲವು ಪರೀಕ್ಷೆಗಳನ್ನು ನಿನ್ನೆ ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ಇಂದು ಹಲವು ಚಿಕಿತ್ಸೆಗಳು ದರ್ಶನ್‌ಗೆ ಶುರು ಆಗಿದೆ. ಅಲ್ಲದೇ ದರ್ಶನ್‌ ಭೇಟಿಗೆ ಕೆಲವು ನಿಯಮಗಳನ್ನು ಕೂಡಾ ಮಾಡಲಾಗಿದೆ. ಏಳು ಜನರಿಗೆ ಮಾತ್ರ ದರ್ಶನ್‌ ಭೇಟಿಗೆ ಅವಕಾಶ ನೀಡಲಾಗಿದೆ. ಇದನ್ನು ದರ್ಶನ್‌ ಕುಟುಂಬದವರು ಆಸ್ಪತ್ರೆಯವರಿಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೇಶ್, ತಾಯಿ ಮೀನಮ್ಮ, ಸಹೋದರ ದಿನಕರ್ ತೂಗುದೀಪ್, ದರ್ಶನ್ ಆಪ್ತ ಧನ್ವೀರ್ ಹಾಗೂ ವಕೀಲರನ್ನು ಬಿಟ್ಟರೆ ಇನ್ಯಾರೂ ಸಹ ದರ್ಶನ್ ಅನ್ನು ಭೇಟಿ ಮಾಡುವಂತಿಲ್ಲ ಎನ್ನಲಾಗಿದೆ.

ದರ್ಶನ್‌ಗೆ ಎಲ್‌1-ಎಲ್‌5 ಸಮಸ್ಯೆ ಹೆಚ್ಚಿದ್ದು, ಈ ಕಾರಣಕ್ಕೆ ತೀವ್ರ ಬೆನ್ನುನೋವು, ಎಡಗಾಲಿನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಎಡಗಾಲು ಸ್ಪರ್ಷಜ್ಞಾನ ಕಳೆದುಕೊಳ್ಳುತ್ತಿದ್ದು ಈ ಕಾರಣಕ್ಕೆ ಶೀಘ್ರ ದರ್ಶನ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಷ್ಟು ಮಾತ್ರವಲ್ಲದೇ, ದರ್ಶನ್‌ಗೆ ಶಸ್ತ್ರಚಿಕಿತ್ಸೆ ಮಾಡಬೇಕಾ ಬೇಡ್ವ ಎನ್ನುವುದು 48 ಗಂಟೆಯೊಳಗೆ ನಿರ್ಧಾರವಾಗಲಿದೆ.

You may also like

Leave a Comment