Home » Director Guruprasad: ನಿರ್ದೇಶಕ ಗುರುಪ್ರಸಾದ್‌ ಪತ್ನಿ ಆಗಮನ; ಟ್ವೀಟ್‌ ಮೂಲಕ ಡಿಕೆಶಿ, ಹೆಚ್‌.ಡಿ. ಕುಮಾರಸ್ವಾಮಿ ಸಂತಾಪ

Director Guruprasad: ನಿರ್ದೇಶಕ ಗುರುಪ್ರಸಾದ್‌ ಪತ್ನಿ ಆಗಮನ; ಟ್ವೀಟ್‌ ಮೂಲಕ ಡಿಕೆಶಿ, ಹೆಚ್‌.ಡಿ. ಕುಮಾರಸ್ವಾಮಿ ಸಂತಾಪ

0 comments

Director Guruprasad: ಅಪಾರ್ಟ್‌ಮೆಂಟ್‌ಗೆ ಮಠ ಗುರುಪ್ರಸಾದ್‌ ಅವರ ಪತ್ನಿ ಬಂದಿದ್ದಾರೆ. ಕಣ್ಣೀರು ಹಾಕುತ್ತಲೇ ಬಂದ ಪತ್ನಿ ಬಂದಿದ್ದಾರೆ. ಇದೀಗ ಬಂದ ಮಾಹಿತಿ ಪ್ರಕಾರ, ನೆಲಮಂಗಲ ಸರಕಾರಿ ಆಸ್ಪತ್ರೆಗೆ ಮೃತದೇಹ ರವಾನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ ಅವರು ಹೇಳಿರುವ ಪ್ರಕಾರ, “ಗುರುಪ್ರಸಾದ್‌ ಅವರು ಐದಾರು ದಿನಗಳ ಹಿಂದೆ ಈ ಅಪಾರ್ಟ್‌ಮೆಂಟ್‌ಗೆ ಬಂದಿದ್ದು, ಅದಾದ ನಂತರ ಕುಟುಂಬದವರು ಬಂದು ಹೋಗಿದ್ದಾರೆ. ಫ್ಲ್ಯಾಟ್‌ನ ಒಳಗೆ ಹೋದ ಗುರುಪ್ರಸಾದ್‌ ಅವರು ನಂತರ ಅವರು ಹೊರಗೆ ಬಂದಿಲ್ಲ. ಹಾಗಾಗಿ ಐದಾರು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ ಎಂದು ಹೇಳಿದ್ದಾರೆ.

ಆರ್ಥಿಕ ಪರಿಸ್ಥಿತಿ ಕುರಿತು ಸ್ವಲ್ಪ ಚಿಂತೆಯಲ್ಲಿದ್ದರು. ಐದಾರು ದಿನದ ಹಿಂದೆ ಈ ಮನೆಗೆ ಬಂದಿದ್ದರು. ಅಕ್ಕಪಕ್ಕದವರು ನೋಡಿದ್ದಾರೆ. ಬಂದ ನಂತರ ಅವರು ಹೊರಗಡೆ ಬಂದಿದ್ದರು. ಐದಾರು ದಿನದ ಹಿಂದೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ವಿವಿಧ ತಂಡಗಳು ವಿವರವಾಗಿ ಪರಿಶೀಲನೆ ಮಾಡುತ್ತಿದ್ದಾರೆ, ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಗುರುಪ್ರಸಾದ್‌ ನಿಧನಕ್ಕೆ ಹೆಚ್‌ಡಿಕೆ ಸಂತಾಪ

ನಿರ್ದೇಶಕ ನಟ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾಗಿದ್ದು ಕೇಳಿ ನೋವಾಗಿದೆ. ಕನ್ನಡ ಚಿತ್ರರಂಗ ಪ್ರತಿಭಾವಂತ ನಿರ್ದೇಶಕನನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಜೊತೆಗೆ ಕನ್ನಡ ಚಿತ್ರರಂಗ ಇತ್ತೀಚೆಗೆ ಸಂಕಷ್ಟದಲ್ಲಿದ್ದು, ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಆರ್ಥಿಕ ಸಂಕಷ್ಟ ಅಥವಾ ಯಾವುದೇ ಸಮಸ್ಯೆಗೆ ಸಿಲುಕಿ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುತ್ತಿರುವುದು ದುರಂತ. ಏನೇ ಸಮಸ್ಯೆಗಳಿದ್ದರೂ ಧೈರ್ಯವಾಗಿ ಎದುರಿಸಬೇಕು. ಇಂತಹ ನಿರ್ಧಾರ ಸರಿಯಲ್ಲ ಎಂದು ಹೇಳಿದ್ದಾರೆ.

ಗುರುಪ್ರಸಾದ್‌ ನಿಧನಕ್ಕೆ ಡಿಕೆಶಿ ಸಂತಾಪ ವ್ಯಕ್ತಪಡಿಸಿದ್ದು, ಟ್ವೀಟ್‌ ಇಲ್ಲಿದೆ.

 

You may also like

Leave a Comment