Home » Director Guruprasad: ʼಸೋರಿಯಾಸಿಸ್‌ʼ ಸಮಸ್ಯೆಯಿಂದ ಬಳಲುತ್ತಿದ್ದ ಗುರುಪ್ರಸಾದ್‌; ಪತ್ನಿ ಹೇಳಿದ್ದೇನು?

Director Guruprasad: ʼಸೋರಿಯಾಸಿಸ್‌ʼ ಸಮಸ್ಯೆಯಿಂದ ಬಳಲುತ್ತಿದ್ದ ಗುರುಪ್ರಸಾದ್‌; ಪತ್ನಿ ಹೇಳಿದ್ದೇನು?

0 comments

Director Guruprasad: ಸಾಲಗಾರರ ಕಾಟಕ್ಕೆ ಬೇಸತ್ತಿದ್ದ ನಟ, ನಿರ್ದೇಶಕ ಮಠ ಗುರುಪ್ರಸಾದ್‌, ಬೆಂಗಳೂರಿನಲ್ಲಿ ಒಂದು ಮನೆಯಿಂದ ಇನ್ನೊಂದು ಮನೆಗೆ ಶಿಫ್ಟ್‌ ಆಗುತ್ತಿದ್ದರು. ಸಾಲ ಮರುಪಾವತಿಮಾಡಲಾಗದೇ ಬೇಸತ್ತಿದ್ದ ಗುರುಪ್ರಸಾದ್.‌ ಇವರ ವಿರುದ್ಧ ಕೋರ್ಟ್‌ನಲ್ಲಿ ಚೆಕ್‌ಬೌನ್ಸ್‌ ಕೇಸ್‌ ಇದೆ. ಬಂಧನ ಭೀತಿ ಕೂಡಾ ಗುರುಪ್ರಸಾದ್‌ ಅವರಿಗಿತ್ತು ಎನ್ನಲಾಗಿದೆ. ವಿವಿಧ ಠಾಣೆಗಳಲ್ಲಿ ಸಾಲಗಾರರಿಂದ ಕೇಸ್‌ ದಾಖಲಾಗಿತ್ತು.

ಗುರುಪ್ರಸಾದ್‌ ಅವರು ಸಾಲಗಾರರಿಂದ ತಪ್ಪಿಸಲು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾಲಗಾರರನ್ನು ತಪ್ಪಿಸಲು ಮೊದಲಿಗೆ ಬಸವೇಶ್ವರನಗರದಲ್ಲಿ, ನಂತರ ಜಯನಗರದ ಕನಕಪಾಲ್ಯದಲ್ಲಿ ಅನಂತರ ಹೋಟೆಲ್‌ನಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದರು. ಕೊನೆಯದಾಗಿ, ದಾಸನಪುರ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಇದಲ್ಲದೆ ಸೋರಿಯಾಸಿಸ್‌ ಸಮಸ್ಯೆಯಿಂದ ಗುರುಪ್ರಸಾದ್‌ ಬಳಲುತ್ತಿದ್ದರು. ಗುರುಪ್ರಸಾದ್‌ ಮೈಮೇಲಿದ್ದ ಗಾಯದ ಗುರುತು ಪೊಲೀಸರಿಂದ ಪ್ರಶ್ನೆ ಮಾಡಿದಾಗ, ಅವರ ಪತ್ನಿ ಸೋರಿಯಾಸಿಸ್‌ ಸಮಸ್ಯೆ ಕುರಿತು ಹೇಳಿದ್ದಾರೆ. ಪತ್ನಿ ಹೇಳಿಕೆ ಆಧರಿಸಿ ಕೇಸ್‌ ದಾಖಲಿಸ್ತಿರುವ ಪೊಲೀಸರು.

ಗುರುಪ್ರಸಾದ್‌ ಅವರು ಮೊದಲನೇ ಹೆಂಡತಿಯಿಂದ ವಿಚ್ಛೇದನ ಪಡೆದಿದ್ದು, ಎರಡನೇ ಮದುವೆಯಾಗಿದ್ದರು. ಮೊದಲ ಹೆಂಡತಿಯಿಂದ ಅವರಿಗೆ 23ವರ್ಷದ ಮಗಳಿದ್ದು, ಹಾಗೂ ಎರಡನೇ ಪತ್ನಿಯಿಂದ ಮೂರು ವರ್ಷದ ಪುಟ್ಟ ಮಗು, ಹಾಗೂ ಇವರು ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಗುರುಪ್ರಸಾದ್‌ ಅವರು ಶ್ರೀನಿವಾಸ್‌ ಎಂಬುವವರಿಂದ 2016ರಲ್ಲಿ ರೂ.30 ಲಕ್ಷ ಸಾಲ ಪಡೆದಿದ್ದರು. ಸಾಲ ನೀಡಿದ್ದ ಶ್ರೀನಿವಾಸ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ಬ್ಯಾಂಕ್‌ನಿಂದ 2018 ರಲ್ಲಿ 40 ಲಕ್ಷ ಸಾಲ ಮಾಡಿದ್ದಾರೆ.
ಕ್ರೌಡ್‌ ಫಂಡಿಂಗ್‌ ಮೂಲಕ ಒಂದು ಕೋಟಿ 16 ಲಕ್ಷ

You may also like

Leave a Comment