Home » Vartur Santosh: ‘ಬಿಗ್ ಬಾಸ್ ಕನ್ನಡ’ ಸ್ಕ್ರಿಪ್ಟೆಡ್ ಶೋ ?! ಮಾಜಿ ಕಂಟೆಸ್ಟೆಂಟ್ ವರ್ತೂರ್ ಸಂತೋಷ್ ಅವರಿಂದಲೇ ಬಯಲಯ್ತು ಅಚ್ಚರಿ ಸತ್ಯ

Vartur Santosh: ‘ಬಿಗ್ ಬಾಸ್ ಕನ್ನಡ’ ಸ್ಕ್ರಿಪ್ಟೆಡ್ ಶೋ ?! ಮಾಜಿ ಕಂಟೆಸ್ಟೆಂಟ್ ವರ್ತೂರ್ ಸಂತೋಷ್ ಅವರಿಂದಲೇ ಬಯಲಯ್ತು ಅಚ್ಚರಿ ಸತ್ಯ

0 comments

Vartur Santosh: ‘ಬಿಗ್ ಬಾಸ್'(Bigg Boss) ಕಿರುತೆರೆಯ ಶೋ ದೇಶ ಮಾತ್ರವಲ್ಲ ವಿಶ್ವಾದ್ಯಂತ ತನ್ನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇಂದು ಭಾರತದಲ್ಲಿ ಹೆಚ್ಚಿನ ಎಲ್ಲಾ ಭಾಷೆಗಳಲ್ಲಿಯೂ ಕೂಡ ಈ ಶೋ ಪ್ರಸಾರವಾಗುವುದನ್ನು ನಾವು ನೋಡಬಹುದು. ಅಂತೆಯೇ ನಮ್ಮ ಕನ್ನಡದಲ್ಲಿ ಇದೀಗ ಬಿಗ್ ಬಾಸ್ 10 ಸೀಸನ್ಗಳನ್ನು ಮುಗಿಸಿ 11ನೇ ಸೀಸನ್ ಅನ್ನು ನಡೆಸಿಕೊಡುತ್ತಿದೆ. ಈ ಬಿಗ್ ಬಾಸ್ ಸ್ಕ್ರಿಪ್ಟೆಡ್ ಶೋ ಎಂಬ ಆರೋಪಗಳು ಕೂಡ ಆಗಾಗ ಕೇಳಿ ಬರುತ್ತದೆ. ಆದರೆ ಇದು ಸುಳ್ಳೆಂದು ಅನೇಕರು ಹೇಳುವುದು ಉಂಟು. ಅಚ್ಚರಿ ಏನೆಂದರೆ ಇದೀಗ ಬಿಗ್ ಬಾಸ್ ಇನ ಮಾಜಿ ಕಂಟೆಸ್ಟೆಂಟ್ ಆಗಿರುವ ವರ್ತೂರು ಸಂತೋಷ್(Vartur Santosh) ಅವರು ಬಿಗ್ ಬಾಸ್ ಸ್ಕ್ರಿಪ್ಟೆಡ್ ಶೋ ಎಂಬುದಾಗಿ ಮಾತನಾಡಿದ್ದಾರೆ.

ಹೌದು ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಸೀಸನ್ ಅಲ್ಲಿ ಐದು ನಿಮಿಷ ಕಿತ್ತಾಡುತ್ತಾರೆ. ಈ ಕಡೆ ಐದು ನಿಮಿಷಕ್ಕೆ ಬಂದ ಕೂಡಲೇ ಎಲ್ಲರೂ ಒಂದಾಗಿ ಆಟ ಆಡುತ್ತಾರೆ. ಹೀಗಾಗಿ ಸ್ಕ್ರಿಪ್ಟೆಡ್ ಆಗಿ ಮಾಡುತ್ತಿದ್ದಾರೆ ಎಂಬುದು ಎವಿಡೆಂಟಾಗಿ ಕಾಣುತ್ತದೆ. ಇದು ಕಾಮನ್ ಆಗಿ ಎಲ್ಲರಿಗೂ ತಿಳಿಯುತ್ತದೆ ಎಂದು ಹೇಳಿ ನಗಾಡಿದ್ದಾರೆ. ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ.

ಇಷ್ಟೇ ಅಲ್ಲದೆ ಹಳ್ಳಿ ಹುಡುಗ, ಕುರಿಗಾಹಿ ಹನುಮಂತ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಅವರು ‘ ಕೆಲವು ವ್ಯಕ್ತಿಗಳು ಫಾರಿನ್ಗೆ ಹೋಗಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಆದರೆ ಇಂಡಿಯಾದಲ್ಲಿ ಏನಿರುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಇದಕ್ಕೆ ಏನು ಹೇಳೋದು? ಸಿಂಪತಿಯಿಂದ ಎಲ್ಲದೂ ಆಗುವುದಿಲ್ಲ. ನಾನೊಂದು ಹೇಳುತ್ತೇನೆ ಬೆಳೆಯುವುದಾದರೆ ನುಗ್ಗೆ ಮರ ಆಗಿ ಬೆಳೆಯಬೇಡಿ. ನುಗ್ಗೆ ಮರ ಬೇಗ ಬಿದ್ದು ಹೋಗುತ್ತದೆ ಆದರೆ ಆಲದ ಮರ ಎಂದು ಕೂಡ ಶಾಶ್ವತವಾಗಿರುತ್ತದೆ. ಆಲದ ಮರದ ರೀತಿಯಲ್ಲಿ ನೀವು ಬೆಳೆಯಿರಿ ಎಂದು ವರ್ತೂರು ಸಂತೋಷ್’ ಹೇಳಿದ್ದಾರೆ.

You may also like

Leave a Comment