Home » Guruprasad : ಗುರುಪ್ರಸಾದ್ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ – ಬಯಲಾಯ್ತು ಸಾವಿನ ಅಸಲಿ ಸತ್ಯ!!

Guruprasad : ಗುರುಪ್ರಸಾದ್ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ – ಬಯಲಾಯ್ತು ಸಾವಿನ ಅಸಲಿ ಸತ್ಯ!!

0 comments

Guruprasad : ಕನ್ನಡದ ಹಿರಿಯ ಕಲಾವಿದ, ನಟ ನಿರ್ದೇಶಕ ಗುರುಪ್ರಸಾದ್ ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ನಿನ್ನೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದೀಗ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು ಅವರ ಸಾವಿನ ಕಾರಣ ಬಯಲಾಗಿದೆ.

ಹೌದು, ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು ಮಾದನಾಯಕಹಳ್ಳಿಯ ಅಪಾರ್ಟ್​ಮೆಂಟ್​ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸಾವಿನ ಹಿಂದೆ ಹಲವಾರು ಅನುಮಾನ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಅವರ ಎರಡನೇ ಪತ್ನಿ ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು. ಇದೀಗ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡೇ ಸಾವಿಗೀಡ್ ಆಗಿದ್ದಾರೆ ಎಂಬ ಸತ್ಯ ಬಯಲಾಗಿದೆ. ಮಾದನಾಯಕನಹಳ್ಳಿಯ ಅಪಾರ್ಟ್​​​​​​​​​ಮೆಂಟ್​​​​​​ನ ಬಾಡಿಗೆ ಫ್ಲ್ಯಾಟ್​​​ನಲ್ಲಿ ಫ್ಯಾನಿಗೆ ಗುರುಪ್ರಸಾದ್ ನೇಣು ಹಾಕಿಕೊಂಡಿದ್ದರಿಂದ ದೇಹ ಉಸಿರುಗಟ್ಟಿ ಮರಣಹೊಂದಿದ್ದಾರೆ ಎಂದು ಮರಣೋತ್ತರ ವರದಿ ಹೇಳಿದೆ.

ಆತ್ಮಹತ್ಯೆ ಸ್ಥಳದ ಸುತ್ತಲು ಕೆಟ್ಟ ವಾಸನೆ ಮಾತ್ರವಲ್ಲ, ದೇಹದ ನರಗಳೆಲ್ಲವೂ ಊತಕೊಂಡ ಸ್ಥಿತಿ ಇದ್ದು , ನೇಣುಬಿಗಿದುಕೊಂಡ ನಂತರದಲ್ಲಿ ಗುರುಪ್ರಸಾದ್ ರಕ್ತ ವಾಂತಿ ಮಾಡಿಕೊಂಡಿದ್ದರು ಎಂಬ ಸಂಗತಿ ಬಯಲಾಗಿದೆ. ಅಲ್ಲದೆ ಗುರುಪ್ರಸಾದ್​​​​​​ ಆತ್ಮಹತ್ಯೆಗೆ ಶರಣಾಗಿ 78 ಗಂಟೆಗಳು ಕಳೆದಿವೆ ಎಂಬ ಅಂಶವೂ ವಿಕ್ಟೋರಿ ಆಸ್ಪತ್ರೆ ನೀಡಿರುವ ವರದಿಯಿಂದ ಹೊರಬಿದ್ದಿದೆ.

You may also like

Leave a Comment