Home » Salman Khan: ‘ನನ್ನ ಮಗನಲ್ಲಿ ಆ ಕೊರತೆ ಇದೆ, ಹೀಗಾಗಿ ಆತ ಇನ್ನೂ ಮದುವೆಯಾಗಿಲ್ಲಿ’ – ಮಗ ಮದುವೆಯಾಗದಿರಲು ಅಸಲಿ ಕಾರಣ ಬಿಚ್ಚಿಟ್ಟ ಸಲ್ಮಾನ್ ಖಾನ್ ತಂದೆ

Salman Khan: ‘ನನ್ನ ಮಗನಲ್ಲಿ ಆ ಕೊರತೆ ಇದೆ, ಹೀಗಾಗಿ ಆತ ಇನ್ನೂ ಮದುವೆಯಾಗಿಲ್ಲಿ’ – ಮಗ ಮದುವೆಯಾಗದಿರಲು ಅಸಲಿ ಕಾರಣ ಬಿಚ್ಚಿಟ್ಟ ಸಲ್ಮಾನ್ ಖಾನ್ ತಂದೆ

0 comments

Salman Khan: ಬಾಲಿವುಡ್‌ ಭಾಯ್‌ಜಾನ್‌ ಎಂದೆ ಪ್ರಖ್ಯಾತಿಯಾಗಿರುವ ಸಲ್ಮಾನ್‌ ಖಾನ್‌(Salman Khan) 58 ನೇ ವಯಸ್ಸಿನಲ್ಲಿಯೂ ಕೂಡ ಮದುವೆಯಾಗದೆ ಉಳಿದಿದ್ದಾರೆ. ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

ಸಲ್ಮಾನ್ ಜೀವನದಲ್ಲಿ ಹಲವು ಹುಡುಗಿಯರು ಬಂದು ಹೋಗಿದ್ದರು ಯಾರು ಕೂಡ ಮದುವೆಯಾಗೋ ಮನಸ್ಸು ಮಾಡಲಿಲ್ಲ. ಅಭಿಮಾನಿಗಳಂತು ನಟ ಮದುವೆ ಯಾಕೆ ಆಗುತ್ತಿಲ್ಲ ಎಂದು ಅಭಿಮಾನಿಗಳು ಹಲವು ವರ್ಷಗಳಿಂದ ಪ್ರಶ್ನೆಗಳನ್ನು ಕೇಳುತ್ತಿದ್ದು, ನಟ ಸಲ್ಮಾನ್‌ ಖಾನ್‌ ಅವರ ತಂದೆ ಇದೀಗ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಯಸ್, ವಿಡಿಯೋದಲ್ಲಿ ನಟ ಸಲ್ಮಾನ್‌ ಖಾನ್‌ ಅವರ ತಂದೆ ಸಲೀಂ ಖಾನ್ (Saleem Khan)ತಮ್ಮ ಮಗ ಇನ್ನೂ ಮದುವೆಯಾಗದೆ ಉಳಿದಿರಲು ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ. ಅದರಲ್ಲಿ ‘ಸಲ್ಮಾನ್‌ ಖಾನ್‌ ಮಗ್ದ ಮನಸ್ಸಿನವನು. ಅವನು ಸುಲಭವಾಗಿ ಸಂಬಂಧದ ಒಳಗೆ ಪ್ರವೇಶಿಸುತ್ತಾನೆ ಆದರೆ ಅವನಿಗೆ ಮದುವೆಯಾಗಲು ಧೈರ್ಯವಿಲ್ಲ. ಏಕೆಂದರೆ ನನ್ನ ಮಗ ತುಂಬಾ ಸರಳ ಸ್ವಭಾವವನ್ನು ಹೊಂದಿದ್ದಾನೆ ಮತ್ತು ಅತೀ ಬೇಗನೆ ಎಲ್ಲರ ಕಡೆಗೆ ಆಕರ್ಷಿತನಾಗುತ್ತಾನೆ ಎಂದು ಹೇಳಿದ್ದಾರೆ.

ಅಲ್ಲದೆ ‘ತಾನು ಮದುವೆಯಾಗುವ ಹೆಣ್ಣು ತನ್ನ ತಾಯಿಯಂತೆ ಕುಟುಂಬವನ್ನು ನಿರ್ವಹಿಸಬಹುದೇ ಎಂಬ ಅನುಮಾನ ಅವನಿಗೆ ಸದಾ ಇದ್ದೇ ಇರುತ್ತದೆ. ಅವನು ತನ್ನ ಪತ್ನಿ ತನ್ನ ತಾಯಿಯಂತೆ ಪತ್ನಿ ಮಕ್ಕಳನ್ನು ನೋಡಿಕೊಳ್ಳಬೇಕು ಹಾಗೂ ಮಕ್ಕಳಿಗೆ ಊಟವನ್ನು ಬೇಯಿಸಬೇಕು, ಅವರು ತಯಾರಾಗಲು ಸಹಾಯ ಮಾಡಬೇಕು, ಮನೆಕೆಲಸವನ್ನು ಮಾಡಿಕೊಂಡು ಹೋಗಬೇಕು ಎಂದು ಬಯಸುತ್ತಾನೆ. ಇಂದಿನ ಕಾಲದಲ್ಲಿ ಇದು ಸುಲಭವಲ್ಲ” ಎಂದಿದ್ದಾರೆ.

You may also like

Leave a Comment