Home » Belthangady : ಅಶ್ಲೀಲ ವಿಡಿಯೋ ಇಟ್ಟುಕೊಂಡು ಹದಿಹರೆಯದ ಹುಡುಗನಿಗೆ ಮಹಿಳೆಯಿಂದ ಬ್ಲಾಕ್ ಮೇಲ್!!

Belthangady : ಅಶ್ಲೀಲ ವಿಡಿಯೋ ಇಟ್ಟುಕೊಂಡು ಹದಿಹರೆಯದ ಹುಡುಗನಿಗೆ ಮಹಿಳೆಯಿಂದ ಬ್ಲಾಕ್ ಮೇಲ್!!

0 comments

Belthangady : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಕತರ್ನಾಕ್ ಮಹಿಳೆಯೊಬ್ಬಳ ನಿಜಬಣ್ಣ ಬಯಲಾಗಿದೆ. ತನ್ನ ಫೇಸ್ ಬುಕ್ ಫ್ರೆಂಡ್ ಬಳಗದಲ್ಲಿರುವ ಹದಿಯರೆಯದ ವಿದ್ಯಾರ್ಥಿ ಓರ್ವನನ್ನು ಬಲೆಗೆ ಬೀಳಿಸಿಕೊಂಡಿರುವ ಈ ಕತರ್ನಾಕ್ ಮಹಿಳೆ ಆತನಿಗೆ ಹನಿ ಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡಲು ಯತ್ನಿಸಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮೂಲತಹ ಬೆಳ್ತಂಗಡಿ(Belthangady ) ನಿವಾಸಿಯಾಗಿರುವ ಕಾಲೇಜು ವಿದ್ಯಾರ್ಥಿಯೋರ್ವನ ಫೇಸ್‌ಬುಕ್ ಸಂಪರ್ಕದಲ್ಲಿದ್ದ ಮಹಿಳೆಯೋರ್ವಳು ಆತನಿಗೆ ಕ್ಲೋಸ್ ಆಗಿ ವೀಡಿಯೊ ಕರೆ ಮಾಡಿದ್ದಳು. ಕರೆ ಸ್ವೀಕರಿಸಿದ ವಿದ್ಯಾರ್ಥಿಗೆ ತನ್ನ ನಗ್ನ ದೇಹವನ್ನು ಕಾಣಿಸಿ ಆತನ ಭಾವನೆಯನ್ನು ಕೆರಳಿಸಲು ಯತ್ನಿಸಿದ್ದಾಳೆ. ಬಳಿಕ ವೀಡಿಯೊ ಕರೆಯಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಯ ಮುಖವನ್ನು ಬಳಸಿ ಅಶ್ಲೀಲ ವೀಡಿಯೊಗೆ ಎಡಿಟ್ ಮಾಡಿ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೇರೊಬ್ಬ ವ್ಯಕ್ತಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆಯನ್ನು ಈತನ ಮುಂದಿರಿಸಿದ್ದಾನೆ.

ಇದರಿಂದ ಆತಂಕಕ್ಕೊಳಗಾದ ವಿದ್ಯಾರ್ಥಿಯು ಈ ವಿಚಾರವನ್ನು ಮಾಧ್ಯಮ ಪ್ರತಿನಿಧಿಯೋರ್ವರ ಗಮನಕ್ಕೆ ತಂದಿದ್ದಾನೆ. ಅವರು ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಯ ಹಾಗೂ ಸೈಬರ್ ಕ್ರೈಮ್ ವಿಭಾಗಕ್ಕೆ ಮಾಹಿತಿಯನ್ನು ತಕ್ಷಣವೇ ರವಾನಿಸಲು ಸಲಹೆ ನೀಡಿದ್ದಾರೆ. ಈ ವೇಳೆ ಪೊಲೀಸರು ಅಕೌಂಟ್ಗಳನ್ನು ಬ್ಲಾಕ್ ಮಾಡಲು ಹೇಳಿದ್ದಾರೆ.

You may also like

Leave a Comment