Home » Shivraj Kumar: ‘ಹೌದು ನನಗೆ ಆ ಪ್ರಾಬ್ಲಮ್ ಇದೆ, ಅದನ್ನ ಯಾಕೆ ಮುಚ್ಚಿಡಬೇಕು’ – ದಿಡೀರ್ ಎಂದು ಮುಚ್ಚಿಟ್ಟ ವಿಚಾರಗಳನ್ನು ಹೇಳಿಕೊಂಡ ಶಿವರಾಜಕುಮಾರ್

Shivraj Kumar: ‘ಹೌದು ನನಗೆ ಆ ಪ್ರಾಬ್ಲಮ್ ಇದೆ, ಅದನ್ನ ಯಾಕೆ ಮುಚ್ಚಿಡಬೇಕು’ – ದಿಡೀರ್ ಎಂದು ಮುಚ್ಚಿಟ್ಟ ವಿಚಾರಗಳನ್ನು ಹೇಳಿಕೊಂಡ ಶಿವರಾಜಕುಮಾರ್

2 comments

Shivraj Kumar: ಮೊನ್ನೆಯಿಂದಲೂ ಚಂದನವನದಲ್ಲಿ ಶಿವಣ್ಣನಿಗೆ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ ಇದು ರೂಮರ್ಸ್ ಎಂದು ಅಭಿಮಾನಿಗಳು ಹಾಗೂ ಜನಸಾಮಾನ್ಯರು ಯಾರು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಈ ಬಗ್ಗೆ ನಟ ಶಿವರಾಜ್ ಕುಮಾರ್ ಅವರ ಸ್ಪಷ್ಟೀಕರಣ ನೀಡಿದ್ದಾರೆ.

ಯಸ್, ಶಿವರಾಜ್ ಕುಮಾರ್(Shivraj Kumar) ಅವರ ಕುರಿತಾದ ಒಂದು ಸುದ್ದಿ ಇಂಡಸ್ಟ್ರಿಯಲ್ಲಿ ಸಣ್ಣಗೆ ಹರಿದಾಡ್ತಾನೇ ಇತ್ತು. ಹಾಗಂತ ಅದನ್ನ ಶಿವಣ್ಣ ಮುಚ್ಚಿಡೋಕೆ ಹೋಗಿಲ್ಲ..ಬದಲಾಗಿ ಹೌದು ಪ್ರಾಬ್ಲಂ ಇದೆ ಅಂತಲೇ ಇದೀಗ ಹೇಳಿದ್ದಾರೆ. ಅಲ್ಲದೆ ಪ್ರಾಬ್ಲಂ ಇದೆ….ಅದಕ್ಕೆ ಟ್ರೀಟ್‌ಮೆಂಟ್ ಕೂಡ ಶುರು ಆಗಿದೆ. ಈಗಾಗಲೇ ಈ ಒಂದು ತೊಂದರೆಯಲ್ಲಿಯೇ ಸಿನಿಮಾ ಕೆಲಸ ಕೂಡ ನಡೆಯುತ್ತಿದೆ. ಹಾಗಂತ ಇದನ್ನ ಮುಚ್ಚಿಡೋದ್ರಲ್ಲಿ ಏನ್ ಅರ್ಥ ಇದೆ ಹೇಳಿ…? ಯಾಕೆ ಮುಚ್ಚಿಡಬೇಕು ಹೇಳಿ? ಹೀಗೆ ಶಿವಣ್ಣ ಪ್ರಶ್ನೆ ಮೇಲೆ ಪ್ರಶ್ನೆ ಕೂಡ ಕೇಳಿದ್ದಾರೆ.

ಇಸ್ಟೇ ಅಲ್ಲದೆ ಸುಮ್ನೆ ಎಲ್ಲವನ್ನೂ ಮುಚ್ಚಿಡೋದ್ರಲ್ಲಿ ಏನಿದೆ? ಯಾಕೆ ಮುಚ್ಚಿಡಬೇಕು ಅಂತ ಕೇಳುವ ಶಿವಣ್ಣ, ಒಂದು ಆಪರೇಷನ್ ಕೂಡ ಮಾಡಿಸೋದು ಇದೆ. ಅದನ್ನ ಬೆಂಗಳೂರಿನಲ್ಲಿಯೇ ಮಾಡಿಸಬೇಕಾ? ಇಲ್ಲ ಅಮೆರಿಕಾದಲ್ಲಿ ಮಾಡಿಸಬೇಕಾ ಅಂತಲೂ ಯೋಚನೆ ಮಾಡುತ್ತಿದ್ದೇವೆ. ಆ ಒಂದು ಆಪರೇಷನ್ ಆದ್ರೆ ಮುಗಿತು ನೋಡಿ. ಆಪರೇಷನ್ ಆದ್ಮೇಲೆ ಮುಗಿತು ನೋಡಿ. ಏನೂ ತೊಂದರೆ ಆಗೋದಿಲ್ಲ. ಎಂದಿನಂತೆ ನಿಮ್ಮ ಶಿವಣ್ಣ ಆಕ್ಟೀವ್ ಆಗಿಯೇ ಇರ್ತಾರೆ. ಏನೂ ತೊಂದರೆ ಇರೋದೇ ಇಲ್ಲ. ಎಲ್ಲವೂ ಎಂದಿನಂತೆ ಅಂತಲೇ ಶಿವಣ್ಣ ಹೇಳಿಕೊಂಡಿದ್ದಾರೆ. ಕನ್ನಡದ ಯೂಟ್ಯೂಬ್ ಚಾನೆಲ್ ಒಂದಕ್ಕೆ ಕೊಟ್ಟ ಸಂದರ್ಶನದಲ್ಲಿಯೇ ಈ ಎಲ್ಲ ವಿಷಯವನ್ನ ಹೇಳಿಕೊಂಡಿದ್ದಾರೆ.

You may also like

Leave a Comment