Home » Child birth: ಪ್ರಕೃತಿ ವಿಸ್ಮಯ! ಒಂದೇ ಹೃದಯ ಇರುವ ಅವಳಿ ಮಕ್ಕಳ ಜನನ!

Child birth: ಪ್ರಕೃತಿ ವಿಸ್ಮಯ! ಒಂದೇ ಹೃದಯ ಇರುವ ಅವಳಿ ಮಕ್ಕಳ ಜನನ!

0 comments

Child birth: ಅಪೂರೂಪದ ಘಟನೆಯೊಂದು ಮಧ್ಯಪ್ರದೇಶದ ಶಾಹದೋಲ್ ವೈದ್ಯಕೀಯ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ. ಹೌದು, ಮಹಿಳೆಯೊಬ್ಬಳು ಒಂದೇ ಹೃದಯ ಹೊಂದಿರುವ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ವಿಶೇಷ ಅಂದರೆ ಎರಡು ದೇಹಕ್ಕೆ ಒಂದೇ ಹೃದಯ, ಕಿಡ್ನಿ ಮತ್ತು ಲಿವರ್ ಇದೆ. ಇದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೆಚ್ಚು ಅಪಾಯಕಾರಿ ಎಂದು ತಜ್ಞರು ಸೂಚನೆ ನೀಡಿದ್ದಾರೆ.

ರವಿ ಜೋಗಿ ಮತ್ತು ವರ್ಷಾ ಜೋಗಿ ದಂಪತಿ ಅನುಪ್ಪುರ್ ಜಿಲ್ಲೆಯ ಕೋಟ್ನಾದಲ್ಲಿ ವಾಸವಿದ್ದು, ವರ್ಷಾ ಜೋಗಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಅವರು ಶಾಹದೋಲ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾದರು. ನಂತರ ಅಲ್ಲಿ ಒಂದೇ ಹೃದಯ ಹೊಂದಿರುವ ಅವಳಿ ಮಕ್ಕಳಿಗೆ (Child birth) ಜನ್ಮ ನೀಡಿದ್ದಾಳೆ.

ಇದೀಗ ಶಾಹದೋಲ್ ವೈದ್ಯಕೀಯ ಕಾಲೇಜಿನ ಸೂಪರಿಂಟೆಂಡೆಂಟ್ ಡಾ.ನಾಗೇಂದ್ರ ಸಿಂಗ್ ಅವರ ಪ್ರಕಾರ ಈ ಅವಳಿ ಮಕ್ಕಳು ಎದೆಯ ಭಾಗದಲ್ಲಿ ಸೇರಿಕೊಂಡು ಒಂದೇ ಹೃದಯವನ್ನು ಹೊಂದಿವೆ. ಹಾಗಾಗಿ ಅವರನ್ನು ಎಸ್‌ಎನ್‌ಸಿಯು ವಾರ್ಡ್‌ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.

ವೈದ್ಯರು ನೀಡಿದ ಮಾಹಿತಿ ಪ್ರಕಾರ, ಮಕ್ಕಳ ದೇಹದಲ್ಲಿನ ಭಾಗಗಳು ಹಂಚಿ ಹೋಗಿವೆ ಮತ್ತು ಭ್ರೂಣ ಇನ್ನೂ ಸರಿಯಾಗಿ ಬೆಳದಿಲ್ಲದ ಕಾರಣ ಅವರ ವಿಭಜನೆ ಮಾಡುವುದು ಕಷ್ಟಕರ ಎಂದು ತಿಳಿಸಿದ್ದಾರೆ. ಇಂತಹ ನೂರು ಪ್ರಕರಣಗಳಲ್ಲಿ ಒಂದು ಅಥವಾ ಎರಡು ಮಕ್ಕಳು ಮಾತ್ರ ಬದುಕುಳಿಯುತ್ತವೆ ಎಂದಿದ್ದಾರೆ.

You may also like

Leave a Comment