Home » America election: ಅರೇ! ಕಮಲಾ ಹ್ಯಾರಿಸ್ ಮೊದಲ ಅಮೆರಿಕಾ ಅಧ್ಯಕ್ಷೆ ಆಗ್ತಾರೆ ಅಂದಿದ್ದ ಜ್ಯೋತಿಷಿ ಎಲ್ಲೋದ್ರು?

America election: ಅರೇ! ಕಮಲಾ ಹ್ಯಾರಿಸ್ ಮೊದಲ ಅಮೆರಿಕಾ ಅಧ್ಯಕ್ಷೆ ಆಗ್ತಾರೆ ಅಂದಿದ್ದ ಜ್ಯೋತಿಷಿ ಎಲ್ಲೋದ್ರು?

0 comments

America election: ಈಗಾಗಲೇ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ (America election) ಟ್ರಂಪ್ ಗೆದ್ದು ಬೀಗುತ್ತಿದ್ದಾರೆ. ಇನ್ನೇನು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ವಿಶೇಷವಾಗಿ ಅಮೆರಿಕಾದ ಚುನಾವಣೆಯಲ್ಲಿ ಅಮೆರಿಕಾ ಅಧ್ಯಕ್ಷರು ಯಾರಾಗ್ತಾರೆ ಎಂಬ ಬಗ್ಗೆ ಜಗತ್ತಿನ ಹಲವು ಪ್ರದೇಶದ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಅದರಂತೆ ಕಮಲಾ ಹ್ಯಾರಿಸ್ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿ ಪ್ರತೋಷ್ ಗೋಪಾಲಕೃಷ್ಣನ್, ಫಲಿತಾಂಶ ಅದಲು ಬದಲು ಆದಾಗ ಸಾಮಾಜಿಕ ಜಾಲತಾಣಕ್ಕೆ ಆಹಾರವಾಗಿದ್ದರೆ. ಅಲ್ಲದೇ ಇನ್ನು ಮುಂದೆ ದೇವರ ಸೂಚನೆ ಬರುವವರೆಗೂ ಭವಿಷ್ಯ ನುಡಿಯುವುದಿಲ್ಲ ಎಂದು ಘೋಷಿಸಿದ್ದಾರೆ.

ಸೆಪ್ಟೆಂಬರ್‌ 29ರಂದು ಜ್ಯೋತಿಷಿ ಪ್ರತೋಷ್ ಗೋಪಾಲಕೃಷ್ಣ ಅವರು, ನನ್ನ ಆಳವಾದ ಜ್ಯೋತಿಷ್ಯ ವಿಶ್ಲೇಷಣೆಯಿಂದ ನಿಖರವಾಗಿ 306 ಸ್ಥಾನಗಳೊಂದಿಗೆ ಕಮಲಾ ಅಯ್ಯರ್ ಹ್ಯಾರಿಸ್ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಇನ್ನು 38 ದಿನಗಳಲ್ಲಿ ಅವರು ಇತಿಹಾಸ ನಿರ್ಮಿಸಲಿದ್ದು, ರಾಹುವಿನ ಮಾಂತ್ರಿಕ ಶಕ್ತಿಯನ್ನು ತಡೆಯಲಾಗದು ಎಂದು ಭವಿಷ್ಯ ನುಡಿದಿದ್ದರು. ಆದರೆ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ 78 ವರ್ಷದ ಟ್ರಂಪ್ 294 ಸೀಟುಗಳನ್ನು ಗೆಲ್ಲುವ ಮೂಲಕ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.

You may also like

Leave a Comment