Home » Mangaluru: ಮಗುವನ್ನು ಕೈಲಿ ಹಿಡಿದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಂದೆ !! ಕೂಡಲೇ ಕಾಪಾಡಿದ ಸ್ಥಳೀಯರು

Mangaluru: ಮಗುವನ್ನು ಕೈಲಿ ಹಿಡಿದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಂದೆ !! ಕೂಡಲೇ ಕಾಪಾಡಿದ ಸ್ಥಳೀಯರು

1 comment

Mangaluru: ಮಂಗಳೂರಿನ ಗುರುಪುರದಲ್ಲಿ ಮಗುವಿನ ಜೊತೆ ಫಲ್ಗುಣಿ ನದಿಗೆ ಹಾರಿ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದ್ರೆ ಕೂಡಲೇ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಹೌದು, ಮಂಗಳೂರಿನ ಗುರುಪುರದಲ್ಲಿ ತಂದೆ ಮಗನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಕೂಡಲೇ ಸ್ಥಳೀಯರು ತಂದೆ ಹಾಗೂ ಎರಡು ವರ್ಷದ ಮಗುವನ್ನು ರಕ್ಷಣೆ ಮಾಡದ್ದಾರೆ. ಕೈಕಂಬ ನಿವಾಸಿ ಸಂದೀಪ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದು ಬಂದಿದೆ.

ಇನ್ನು ತಂದೆ ಹಾಗೂ ಮಗನು ರಕ್ಷಿಸಿದ ಸ್ಥಳೀಯರು, ಬಳಿಕ ಸಂದೀಪ್ ಗೆ ಬುದ್ಧಿವಾದ ಹೇಳಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂದೀಪ್ ತನ್ನ ಎರಡು ವರ್ಷದ ಮಗುವನ್ನು ಕರೆದುಕೊಂಡು ಫಲ್ಗುಣಿ ನದಿ ಬಳಿ ಬಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ, ಘಟನೆ ಕುರಿತಂತೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment