Home » Mangalore: ಸ್ಯಾನಿಟೈಸರ್‌ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

Mangalore: ಸ್ಯಾನಿಟೈಸರ್‌ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

0 comments

Mangalore: ನೆರಿಯ ಗ್ರಾಮದ ಅಲಂಗಾಯಿ ವಾಲ್ಮೀಕಿ ಅಶ್ರಮ ಶಾಲೆಯ ಹಾಸ್ಟೆಲ್‌ನ ಎಂಟನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಇಂದು ಬೆಳಗ್ಗೆ ನಡೆದಿದೆ. ವಿಜಯಪುರದ ವಿದ್ಯಾರ್ಥಿನಿ ಬೆಳಿಗ್ಗೆ ಸ್ಯಾನಿಟೈಸರ್‌ ಸೇವಿಸಿದ್ದು, ಆಕೆ ವಾಂತಿ ಮಾಡಿಕೊಂಡಿದ್ದು, ತೀವ್ರ ಅಸ್ವಸ್ಥ ಉಂಟಾಗಿದ್ದು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿದ್ಯಾರ್ಥಿನಿ ಮನೆಗೆ ಹೋಗುತ್ತೇನೆ ಎಂದು ಕೆಲವು ದಿನಗಳಿಂದ ಹೇಳುತ್ತಿದ್ದುದ್ದು, ನಂತರ ಏನಾಯಿತು ಎಂದು ಗೊತ್ತಾಗಿಲ್ಲ. ಆದರೆ ಇಂದು ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ. ಆದರೆ  ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ ಎಂದು ಇನ್ನು ತಿಳಿದು ಬರಬೇಕಿದೆ.

You may also like

Leave a Comment