4
Mangalore: ನಗರದಲ್ಲಿ ಬಾಣಂತಿಯೋರ್ವರು ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಮೃತಪಟ್ಟ ಘಟನೆಯೊಂದು ಇಂದು (ಸೋಮವಾರ ನ.11) ಬೆಳಗ್ಗೆ ನಡೆಸಿದೆ.
ಲೇಡಿಗೋಷನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಕಾರ್ಕಳದ ರಂಜಿತಾ (28) ಮೃತಪಟ್ಟ ಮಹಿಳೆ.
ರಂಜಿತಾ ಅವರು ಹೆರಿಗೆಗೆಂದು ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಕ್ಲಿಷ್ಟ ಆರೋಗ್ಯ ಸಮಸ್ಯೆ ಉಂಟಾಗಿದ್ದಕ್ಕೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಅ.28 ರಂದು ದಾಖಲು ಮಾಡಲಾಗಿತ್ತು. ಅ.30 ಕ್ಕೆ ಸಿಸೇರಿಯನ್ ಮೂಲಕ ಹೆರಿಗೆಯಾಗಿತ್ತು. ಮಗು ಎನ್‌ಐಸಿಯುನಲ್ಲಿತ್ತು. ಆದರೆ ನ.3 ರಂದು ಮಗು ಮೃತ ಹೊಂದಿತ್ತು.
ನಂತರ ಡಾಕ್ಟರ್ ಮಹಿಳೆ ಗುಣಮುಖರಾಗಿದ್ದ ಕಾರಣ ಸೋಮವಾರ ಡಿಸ್ಚಾರ್ಜ್ ಮಾಡಲು ಸೂಚಿಸಿದ್ದರು. ಮನೆಯವರೆಲ್ಲರೂ ಆಸ್ಪತ್ರೆಯಲ್ಲೇ ಇದ್ದರು. ಆದರೆ ಮಹಿಳೆ ಏಕಾಏಕಿ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ. ಕೂಡಲೇ ಮಹಿಳೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಲ್ಲಿ ಆಕೆ ಮೃತಪಟ್ಟಿದ್ದಾರೆಂದು ವೈದ್ಯಾಧಿಕಾರಿಯವರು ತಿಳಿಸಿದ್ದಾರೆ.
