Moodabidre: ಕಾಲೇಜು ಬಸ್ಸನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗಳು ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆಯೊಂದು ತೋಡಾರಿನಲ್ಲಿ ನಡೆದಿದೆ.
ಘಟನೆ ನಡೆದ ನಂತರ ವಿದ್ಯಾರ್ಥಿಗಳು ಬಸ್‌ನ ಗಾಜನ್ನು ಹೊಡೆದು ಧ್ವಂಸ ಮಾಡಿದ್ದು, ಪ್ರತಿಭಟನೆ ನಡೆಸಿದ್ದಾರೆ.
ಮಾಸ್ಟರ್ ಎಂಬ ಹೆಸರಿನ ಖಾಸಗಿ ಬಸ್ಸೊಂದು ಮೂಡುಬಿದಿರೆಯಿಂದ ಮಂಗಳೂರಿನತ್ತ ಹೋಗುವ ಸಂದರ್ಭದಲ್ಲಿ ತೋಡಾರ್ ಮೈಟ್ ಕಾಲೇಜ್ ಬಳಿ ಬರುತ್ತಿದ್ದ ಕಾಲೇಜು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ತಾಯಿ ಮತ್ತು ಮಗಳು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಕೂಡಾ ಡಿಕ್ಕಿ ಹೊಡೆದಿದೆ.
ಖಾಸಗಿ ಬಸ್‌ಗಳ ರಭಸದ ಓಡಾಟದಿಂದ ಈ ರೀತಿಯ ಅವಘಡ ನಡೆಯುತಿದ್ದು, ಇದನ್ನು ಖಾಸಗಿ ಬಸ್‌ನವರು ಕ್ಯಾರೇ ಮಾಡದೇ ತಮ್ಮ ಅದೇ ಛಾಳಿಯನ್ನು ಮುಂದುವರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದು, ಪ್ರತಿಭಟನೆ ಮಾಡುತ್ತಿದ್ದಾರೆ.
ತಾಯಿಗೆ ಸ್ವಲ್ಪ ಗಾಯವಾಗಿದ್ದು, ಮಗಳಿಗೆ ಗಂಭೀರ ಗಾಯವಾಗಿದೆ. ಬಸ್ಸಿನ ಚಾಲಕ ತಪ್ಪಿಸಿಕೊಂಡಿದ್ದು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿದ್ದು, ಉದ್ರಿಕ್ತ ವಿದ್ಯಾರ್ಥಿಗಳನ್ನು ಸಮಾಧಾನ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಬಸ್ಸಿನ ಓನರ್ ಸ್ಥಳಕ್ಕೆ ಬರಬೇಕೆಂದು ಆಗ್ರಹ ಮಾಡುತ್ತಿದ್ದು, ಪ್ರತಿಭಟನೆ ಮುಂದುವರೆಸಿದ್ದಾರೆ.
