Home » Thumakur : ಹೆತ್ತ ಮಗನನ್ನು ಸಾಯಿಸಲು ಅನುಮತಿ ಕೇಳಿದ ತಾಯಿ – ಕಾರಣ ಗೊತ್ತಾದ್ರೆ ನೀವೂ ಮರುಗುತ್ತೀರಾ!!

Thumakur : ಹೆತ್ತ ಮಗನನ್ನು ಸಾಯಿಸಲು ಅನುಮತಿ ಕೇಳಿದ ತಾಯಿ – ಕಾರಣ ಗೊತ್ತಾದ್ರೆ ನೀವೂ ಮರುಗುತ್ತೀರಾ!!

2 comments

Tumakur : ಪ್ರಪಂಚದಲ್ಲಿ ತಂದೆ ತಾಯಿಯನ್ನ ಕೊಂದ ಮಕ್ಕಳಿದ್ದಾರೆ. ಆದ್ರೆ, ತಾನೇ ಜನ್ಮ ಕೊಟ್ಟ ಮಗನನ್ನ ತಾಯಿಯೇ ಕೊಂದಿದ್ದು ತುಂಬಾ ಕಮ್ಮಿ. ಆದರೆ ಇನ್ನೊಬ್ಬಳು ತಾಯಿ ತನ್ನ ಮಗನನ್ನು ಕೊಲ್ಲಲು ಅನುಮತಿ ನೀಡಿ ಎಂದು ಬೀದಿಗೆ ಬಂದು ಕಣ್ಣೀರಿಟ್ಟಿದ್ದಾಳೆ. ಇದರ ಹಿಂದಿರುವ ಕಾರಣವನ್ನು ನೀವೇನಾದರೂ ತಿಳಿದರೆ ಕಣ್ಣೀರು ಬರುವುದು ಪಕ್ಕಾ.

ಒಂಭತ್ತು ತಿಂಗಳು ಹೆತ್ತು ಹೊತ್ತು ಇಷ್ಟು ದಿನ ಸಾಕಿದ ಮಗನನ್ನ ತನ್ನ ಕೈಯಾರೆಯೇ ಸಾಯಿಸ್ತೀನಿ ಅಂತಿದಾರೆ ಅಂದ್ರೆ, ಈ ತಾಯಿ ಅದೆಷ್ಟು ನೊಂದಿರ್ಬೇಡ. ಹೆತ್ತ ಕರುಳಿಗೆ ಈ ಪಾಪಿ ಮಗ ಅದೆಷ್ಟು ನೋವು ಕೊಟ್ಟಿರ್ಬೇಡ. ಈತನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ಕೊಡಿ ಎಂದು ಅಳಲು ತೋಡಿಕೊಂಡಿರುವ ಆ ಮಹಾತಾಯಿ ಎಷ್ಟು ನೊಂದಿರಬೇಡ. ಹಾಗಿದ್ರೆ ಆ ತಾಯಿ ಮಗನನ್ನು ಸಾಯಿಸಲು ಅನುಮತಿ ಕೇಳಿದ್ದಕ್ಕೆ ಗೊತ್ತಾ. ಇಲ್ಲಿದೆ ನೋಡಿ ಮನ ಕರಗುವಂತಹ ಘಟನೆ.

ಅಂದಹಾಗೆ ಈ ಘಟನೆ ತುಮಕೂರು (Tumakuru) ಜಿಲ್ಲೆ ತುರುವೇಕೆರೆ (Turuvekere)ಯಲ್ಲಿ ನಡೆದಿದೆ. ಪಟ್ಟಣದಲ್ಲಿ ಸಣ್ಣ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ರೇಣುಕಮ್ಮ ಎಂಬ ಮಹಿಳೆಯ 20 ವರ್ಷ ವಯಸ್ಸಿನ ಮಗ ಅಭಿ ಎಂಬಾತನಿಂದ ಕಣ್ಣೀರು ಸುರಿಸಿದ್ದಾರೆ. ಸ್ನೇಹಿತರ ಸಹವಾಸಕ್ಕೆ ಬಿದ್ದು ಅಭಿ, ಡ್ರಗ್ಸ್ ದಾಸನಾಗಿದ್ದಾನೆ. ಚಟಗಳಿಂದ ಮುಕ್ತಗೊಳಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಆದರೂ ಪ್ರಯೋಜನವಾಗಿಲ್ಲ. ಪಟ್ಟಣದಲ್ಲಿ ಗಾಂಜಾ ಸೇರಿದಂತೆ ಹಲವಾರು ಮಾದಕ ವಸ್ತುಗಳು ಮಾರಾಟವಾಗುತ್ತಿವೆ. ಇದು ಯುವಕರನ್ನು ಹಾಳು ಮಾಡುತ್ತಿದೆ. ನನ್ನ ಮಗನೂ ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದಾನೆ. ಹೀಗೆ ಪಟ್ಟಣದಲ್ಲಿ ಸಾಕಷ್ಟು ಯುವಕರಿದ್ದಾರೆ. ಹೀಗಾಗಿ ಪೊಲೀಸರು ಎಚ್ಚೆತ್ತುಕೊಳ್ಳಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ.

ಇನ್ನು ಶನಿವಾರ ಮಧ್ಯಾಹ್ನ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ರೇಣುಕಮ್ಮಳ ಮಗ ಅಭಿ, ಅಲ್ಲಿದ್ದ ಕೆಲವು ಬಾಲಕಿಯರನ್ನು ಚುಡಾಯಿಸಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಗಮನಿಸಿದ ಅಲ್ಲೇ ಇದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಭಿಯನ್ನು ಥಳಿಸಿದ್ದಾರೆ ಎನ್ನಲಾಗಿದೆ.

You may also like

Leave a Comment