Home » ಉಜಿರೆ: ಅಸೌಖ್ಯದಿಂದ ಕಾಲೇಜು ವಿದ್ಯಾರ್ಥಿ ನಿಧನ

ಉಜಿರೆ: ಅಸೌಖ್ಯದಿಂದ ಕಾಲೇಜು ವಿದ್ಯಾರ್ಥಿ ನಿಧನ

1 comment

Ujire: ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಚಿನ್ಮಯ್‌ ಗೌಡ ಪಿ.ಕೆ ಎಂಬ ವಿದ್ಯಾರ್ಥಿ ನ.12 (ಇಂದು) ನಿಧನ ಹೊಂದಿದ್ದಾರೆ. ಇವರು ಉಜಿರೆ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದರು.

ಮಂಡ್ಯ ಮೂಲದವರಾದ ಚಿನ್ಮಯ್‌ ಗೌಡ ಅವರು ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದು, ಅಲ್ಲಿಂದಲೇ ಕಾಲೇಜಿಗೆ ಹೋಗುತ್ತಿದ್ದರು.

ಚಿನ್ಮಯ್‌ ಅವರು ಉತ್ತಮ ಕಬಡ್ಡಿಪಟುವಾಗಿದ್ದು, ಅವರು ಕಲಿತ ಕಾಲೇಜಿಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಟ್ಟಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಚಿನ್ಮಯ್‌ ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಅವರು ನಿಧನ ಹೊಂದಿದ್ದಾರೆ.

You may also like

Leave a Comment