Home » Shivamogga: ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿಯ ಓಡಾಟ – 13 ಜನರಿಂದ ಹಲ್ಲೆ, ಪ್ರಕರಣ ದಾಖಲು

Shivamogga: ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿಯ ಓಡಾಟ – 13 ಜನರಿಂದ ಹಲ್ಲೆ, ಪ್ರಕರಣ ದಾಖಲು

1,073 comments

Shivamogga: ಹಿಂದೂ ಯುವಕನೊಂದಿಗೆ ಓಡಾಡುತ್ತಿದ್ದಾಳೆ ಎಂದು ಮುಸ್ಲಿಂ ಯುವತಿಯ ಮೇಲೆ ಅದೇ ಸಮುದಾಯದ ಯುವಕರು ಹಲ್ಲೆ ನಡೆಸಿದ್ದಾರೆ. ಇದೀಗ ಈ ಸಂಬಂಧ 13 ಮಂದಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ(Shivamogga) ಜಿಲ್ಲೆಯ ಅರಬಿಳಚಿ ಗ್ರಾಮದ ಯುವತಿ ಅದೇ ಊರಿನ ಯುವಕನೊಂದಿಗೆ ಓಡಾಡುತ್ತಿದ್ದರು. ಇದನ್ನು ಗಮನಿಸಿದ್ದ ಆರೋಪಿಗಳಾದ ಮಕ್ಬೂರ್ ಪಾಷಾ, ತೋಹಿದ್, ರಫೀಕ್ ತಸೀನಾ, ತಾಂಜೀಯಾ, ಕಲೀಂ, ಸುನ್ನು, ನಸ್ರುಲ್ಲಾ, ಅಬ್ದುಲ್, ಜಿಶಾನ್, ರಿಜ್ವಾನ್, ಅಬ್ದುಲ್ಲಾ, ಅಬ್ಬಾಸ್ ಅಲಿ ಹಾಗೂ ಅಕ್ಬರ್ ಈ ಕುರಿತು ಯುವತಿಯನ್ನು ಪ್ರಶ್ನಿಸಿ ಹಲ್ಲೆ ಕೂಡ ನಡೆಸಿದ್ದರು. ಈ ಸಂಬಂಧ ಯುವತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಹಿಂದೂ ಧರ್ಮದ ಯುವಕನೊಂದಿಗೆ ಏಕೆ ಓಡಾಡುತ್ತಿಯಾ ಎಂದು ಆರೋಪಿಗಳು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ. ಮಸೀದಿ ಸಮಿತಿಯವರು ಕರೆಯುತ್ತಿರುವುದಾಗಿ ಹೇಳಿದ್ದು, ತಾಯಿಯೊಂದಿಗೆ ಸ್ಥಳಕ್ಕೆ ಹೋದಾಗ ಥಳಿಸಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

You may also like

Leave a Comment