Home » Murder Case: ಬಿಷ್ಣೋಯಿ ಗ್ಯಾಂಗ್ ಹಿಟ್ ಲಿಸ್ಟ್ ನಲ್ಲಿ ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್‌!

Murder Case: ಬಿಷ್ಣೋಯಿ ಗ್ಯಾಂಗ್ ಹಿಟ್ ಲಿಸ್ಟ್ ನಲ್ಲಿ ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್‌!

13 comments

Murder Case: ಶ್ರದ್ಧಾ ವಾಕರ್‌ರನ್ನು, ಕೊಲೆ ಮಾಡಿ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್‌ನಲ್ಲಿಟ್ಟು, ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಕೊಲೆ ಆರೋಪಿ (Murder Case) ಅಫ್ತಾಬ್‌ ಪೂನಾವಾಲಾ, ಪಾತಕಿ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನಲ್ಲಿ ಆಕ್ಟಿವ್ ಆಗಿದ್ದಾನೆ ಎಂದು ವರದಿಯೊಂದು ಹೇಳಿದೆ.

ಹೌದು, ಇತ್ತೀಚೆಗೆ ಮಹಾರಾಷ್ಟ್ರದ ಎನ್‌ಸಿಪಿಯ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಆರೋಪಿ ಶುಭಂ ಲೋಂಕರ್‌ ತನಿಖೆ ವೇಳೆ ಈ ಮಾಹಿತಿ ತಿಳಿದು ಬಂದಿದೆ ಎಂದು ವರದಿ ಆಗಿದೆ.

ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದಲ್ಲಿ ಮುಂಬೈ ಕ್ರೈಂ ಬ್ರಾಂಚ್ ಇದುವರೆಗೆ 24 ಶಂಕಿತರನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಆರೋಪಿಗಳಾದ ಜೀಶನ್ ಅಖ್ತರ್ ಮತ್ತು ಶುಭಂ ಲೋಂಕರ್ ಆಗಿದ್ದಾರೆ. ಮೂಲಗಳ ಪ್ರಕಾರ, ಈ ವರ್ಷದ ಜನವರಿಯಲ್ಲಿ ಅಕೋಲಾ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಶುಭಂ ಲೋಂಕರ್ ಅವರನ್ನು ಬಂಧಿಸಿದ್ದರು.

ಇನ್ನು ಮೇ 2022 ರಲ್ಲಿ, ಯುವತಿ ಶ್ರದ್ಧಾ ‘ವಾಲ್ಕರ್, ದೆಹಲಿಯಲ್ಲಿ ಆಕೆಯ ಗೆಳೆಯ ಅಫ್ತಾಬ್ ಪೂನಾವಾಲಾನಿಂದ ತುಂಡು ತುಂಡಾಗಿ ಕತ್ತರಿಸಿದ ಭೀಕರ ಸ್ಟಿತಿಯಲ್ಲಿ ಹತ್ಯೆಗೀಡಾಗಿದ್ದರು. ಈ ಪ್ರಕರಣವು ನವೆಂಬರ್ 2022 ರಲ್ಲಿ ಬೆಳಕಿಗೆ ಬಂದಿತು. ನಂತರ ದೆಹಲಿ ಪೊಲೀಸರು ಅಫ್ತಾಬ್ ಅನ್ನು ಬಂಧಿಸಿದರು. ಪ್ರಸ್ತುತ ಅಫ್ತಾಬ್ ತಿಹಾರ್‌ನಲ್ಲಿದ್ದಾನೆ ಮತ್ತು ಅವನು ಬಿಷ್ಣೋಯ್ ಗ್ಯಾಂಗ್‌ನ ಗುರಿಯಾಗಿದ್ದಾನೆ ಎಂದು ವರದಿಯಾಗಿದೆ. ಈ ಮಾಹಿತಿಯು ಮಹಾರಾಷ್ಟ್ರ ಎಟಿಎಸ್ ಮತ್ತು ಗುಪ್ತಚರ ಸಂಸ್ಥೆಗಳನ್ನು ಎಚ್ಚರಿಸಿದೆ.

You may also like

Leave a Comment