Home » Tejaswini Gowda: ‘ರಾಧಿಕಾ ಕರಿಯ ಅಂದ್ರೆ ಓಕೆ, ಜಮೀರ್​ ಹೇಳಿದ್ರೆ ಆಗಲ್ಲ ಯಾಕೆ? – ಕೈ ನಾಯಕಿ ತೇಜಸ್ವಿನಿಗೌಡ ವಿವಾದಾತ್ಮಕ ಸ್ಟೇಟ್ಮೆಂಟ್

Tejaswini Gowda: ‘ರಾಧಿಕಾ ಕರಿಯ ಅಂದ್ರೆ ಓಕೆ, ಜಮೀರ್​ ಹೇಳಿದ್ರೆ ಆಗಲ್ಲ ಯಾಕೆ? – ಕೈ ನಾಯಕಿ ತೇಜಸ್ವಿನಿಗೌಡ ವಿವಾದಾತ್ಮಕ ಸ್ಟೇಟ್ಮೆಂಟ್

1 comment

Tejaswini Gowda : ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಕುಮಾರಸ್ವಾಮಿಯವರಿಗೆ (HD Kumarswamy) ಕರಿಯ ಎನ್ನುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmad Khan) ವಿವಾದಾತ್ಮಕ ಹೇಳಿಕೆ ನೀಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಇದರ ನಡುವೆಯೇ ಕಾಂಗ್ರೆಸ್​​ನ ನಾಯಕಿ ಹಾಗೂ ಮಾಜಿ ಸಂಸದೆ ತೇಜಸ್ವಿನಿ ಗೌಡ(Tejaswini Gouda)ಅವರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಜಮೀರ್ ಅವರ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

ಯಸ್, ಕುಮಾರಸ್ವಾಮಿ ಅವರನ್ನು ಜಮೀರ್​ ಅವರು ಕರಿಯ ಅಂದ್ರೆ ತಪ್ಪಾಗುತ್ತೆ, ಆದ್ರೆ ರಾಧಿಕಾ ಕುಮಾರಸ್ವಾಮಿ ಅವರು ಕರಿಯ, ಚಿನ್ನು ಅಂತಾ ಕರೆದರೆ ತಪ್ಪಾಗಲ್ವಾ ಎಂದು ಹೇಳಿ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. ಹೌದು, ಯಾವುದೋ ಒಂದು ಸಂದರ್ಶನದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕುಮಾರಸ್ವಾಮಿ ಅವರನ್ನು ಏನಂತಾ ಕರಿತೀರಾ ಎಂಬ ಪ್ರಶ್ನೆಗೆ .. ಚಿನ್ನು ಅಂತಾ ಕರೀತಿನಿ…ಮತ್ತೇನು ಅಂತಾ ಕರಿತೀರಿ.. ಕರಿಯ ಅಂತಾ ಕರಿತೀನಿ ಅಂತಾ ಹೇಳಿದ್ದು ಮಾಧ್ಯಮದಲ್ಲಿ ನೋಡಿರುವುದಾಗಿ ತೇಜಸ್ವಿನಿಗೌಡ ಅವರು ಹೇಳಿದ್ದಾರೆ. ಈ ಅವರ ಹೇಳಿಕೆ ಇದೀಗ ಮಗದೊಮ್ಮೆ ರಾಜಕೀಯ ತಿಕ್ಕಾಟ ಆರಂಭಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

You may also like

Leave a Comment