Home » Sulia : ಮನೆಗೆ ನುಗ್ಗಿದ ಮದುವೆ ದಿಬ್ಬಣದ ಬಸ್- ಸಂಪೂರ್ಣ ಜಖಮ್ ಆದ ಮನೆ!!

Sulia : ಮನೆಗೆ ನುಗ್ಗಿದ ಮದುವೆ ದಿಬ್ಬಣದ ಬಸ್- ಸಂಪೂರ್ಣ ಜಖಮ್ ಆದ ಮನೆ!!

3 comments

Sulia : ಮದುವೆ ಪ್ರಯಾಣಿಕರಿದ್ದ ಬಸ್ ವೊಂದು ರಸ್ತೆಯ ಬದಿಯ ಮನೆಯೊಂದಕ್ಕೆ ನುಗ್ಗಿದ ಡ ಘಟನೆ ಸುಳ್ಯದ(Sulia) ಅಮ್ಚಿನಡ್ಕ ಎಂಬಲ್ಲಿ ನಡೆದಿದೆ. ಅಪಘಾತಕ್ಕೆ ಮನೆ ಸಂಪೂರ್ಣ ಜಖಂಗೊಂಡಿದೆ.

ಸುಳ್ಯ- ಪುತ್ತೂರು(Sulia -putturu)ರಸ್ತೆಯ ಅಮ್ಚಿನಡ್ಕ ಬಳಿ ಅಪಘಾತ ಸಂಭವಿಸಿದೆ. ಮದುವೆಗೆ ತೆರಳುವ ಪ್ರಯಾಣಿಕರಿದ್ದ ಬಸ್‌ ಪುತ್ತೂರಿನಿಂದ ಸುಳ್ಯದ ಕಡೆಗೆ ಹೋಗುತ್ತಿತ್ತು. ಮಧುರ ಇಂಟರ್ ನ್ಯಾಷನಲ್ ಸ್ಕೂಲ್‌ಗೆ ಸೇರಿದ ಬಸ್‌ ಸುಳ್ಯದಿಂದ ಪರ್ಲ೦ಪಾಡಿಗೆ ಮಕ್ಕಳನ್ನು ಕರೆದುಕೊಂಡು ಬರಲು ತೆರಳುತ್ತಿದ್ದ ವೇಳೆ ಅಮ್ಮಿನಡ್ಕ ಬಳಿ ಪರ್ಲಂಪಾಡಿ ಕಡೆಗೆ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಮದುವೆ ಬಸ್‌ ಬಂದಿದ್ದು ಅದರ ಚಾಲಕ ಸ್ಕೂಲ್ ಬಸ್ಸಿಗೆ ಡಿಕ್ಕಿ ಹೊಡೆಯುವದನ್ನು ತಪ್ಪಿಸಲು ಇನ್ನೊಂದು ಬದಿಗೆ ವಾಹನವನ್ನು ತಿರುಗಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್‌ ರಸ್ತೆ ಅಂಚಿನಲ್ಲಿದ್ದ ಮನೆಗೆ ನುಗ್ಗಿದೆ.

ಪುಣ್ಯಕ್ಕೆ ಈ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ಬಸ್‌ನಲ್ಲಿದ್ದವರಿಗೂ ಸಣ್ಣಪುಟ್ಟ ತರಚು ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

You may also like

Leave a Comment