Home » Rashmika Mandanna: ರಶ್ಮಿಕಾ ರಿಲೇಷನ್‌ಶಿಪ್‌ ಸೀಕ್ರೆಟ್ ರೀವಿಲ್

Rashmika Mandanna: ರಶ್ಮಿಕಾ ರಿಲೇಷನ್‌ಶಿಪ್‌ ಸೀಕ್ರೆಟ್ ರೀವಿಲ್

290 comments
Rashmika Mandanna

Rashmika Mandanna: ಚಿತ್ರರಂಗ ಲೋಕದಲ್ಲಿ ನ್ಯಾಷನಲ್ ಕ್ರಶ್ ಆಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಪುಷ್ಪ 2’ (Pushpa 2) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಚೆನ್ನೈನಲ್ಲಿ ನಡೆದ ‘ಪುಷ್ಪ 2’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪ್ರೀತಿ ಬಗ್ಗೆ ಸೀಕ್ರೆಟ್ ಒಂದು ರಿವೀಲ್ ಮಾಡಿದ್ದಾರೆ.

ಹೌದು, ವೇದಿಕೆಯಲ್ಲಿ ಮದುವೆಗೆ ಸಂಬಂಧಿಸಿದ ಪ್ರಶ್ನೆಯನ್ನು ರಶ್ಮಿಕಾಗೆ ಕೇಳಿದಾಗ ರಶ್ಮಿಕಾ ಸ್ವಲ್ಪ ಹೊತ್ತು ಯೋಚಿಸಿ ನಂತರ ನಗುತ್ತಲೇ ಅವರು ನಿಮಗೆಲ್ಲ ಗೊತ್ತು ಎಂದು ಸುಳಿವು ನೀಡಿದರು.

ಇನ್ನು ನೀವು ಚಿತ್ರರಂಗದ ಯಾರನ್ನಾದರೂ ಮದುವೆಯಾಗುತ್ತೀರಾ? ಅಥವಾ ಹೊರಗಿನವರಾ? ಎಂದು ಮತ್ತೆ ಕೇಳಿದಾಗ, ಅದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ರಶ್ಮಿಕಾ ನಸು ನಕ್ಕರು. ನಮಗೆ ಗೊತ್ತಿಲ್ಲ. ಒಂದು ಸಣ್ಣ ಸುಳಿವು ಕೊಡಿ ಎಂದು ಮತ್ತೆ ಪ್ರಶ್ನಿಸಿದಾಗ ಹಾಗೆ ಹೇಳುವುದು ಬೇಡ. ನಾನೇ ಒಂದು ದಿನ ಎಲ್ಲವನ್ನೂ ಹೇಳುತ್ತೇನೆ ಎಂದು ನಗುತ್ತಲೇ ರಶ್ಮಿಕಾ ತಿಳಿಸಿದರು.

ಇನ್ನು ಇತ್ತೀಚೆಗೆ ವಿಜಯ್ ದೇವರಕೊಂಡ (Vijay Devarakonda) ಸಹ ತಾವು ಸಿಂಗಲ್ ಅಲ್ಲ ಎಂದಿದ್ದರು. ಈಗ ರಶ್ಮಿಕಾ ಮಂದಣ್ಣ ಸಹ ಇದೇ ರೀತಿ ಮಾತನಾಡಿದ್ದು, ಇವರ ಈ ಉತ್ತರದಿಂದ ಬಹುತೇಕರು ರಶ್ಮಿಕಾ ಮತ್ತು ವಿಜಯ್ ಪ್ರೀತಿಯಲ್ಲಿ ಬಿದ್ದಿದ್ದು, ಶೀಘ್ರದಲ್ಲೇ ಈ ವಿಚಾರ ರಿವೀಲ್ ಮಾಡಬಹುದು ಎಂದು ಕಾಯುತ್ತಿದ್ದಾರೆ.

 

You may also like

Leave a Comment