Home » Murder: ಆ ಒಂದು ಖಾಯಿಲೆ ವಾಸಿಯಾಗಲು ಮೊಮ್ಮಗನಿಂದಲೇ ಅಜ್ಜಿ ಮೇಲೆ ಅತ್ಯಾಚಾರ, ಅಜ್ಜನ ಕೊಲೆ

Murder: ಆ ಒಂದು ಖಾಯಿಲೆ ವಾಸಿಯಾಗಲು ಮೊಮ್ಮಗನಿಂದಲೇ ಅಜ್ಜಿ ಮೇಲೆ ಅತ್ಯಾಚಾರ, ಅಜ್ಜನ ಕೊಲೆ

0 comments

Murder: ಚಿಕ್ಕಮಂಗಳೂರು ತಾಲೂಕಿನ (Chikkamagaluru) ಕೊಳಗಾಮೆ ಗ್ರಾಮದಲ್ಲಿ ನಡೆದಿದ್ದ ವೃದ್ಧ ದಂಪತಿಯ ಜೋಡಿ ಕೊಲೆ (Murder) ಕೇಸ್‌ ನ ಅಸಲಿ ಕಾರಣ ಇದೀಗ ಬಯಲಾಗಿದೆ. ಹೌದು, ಮೊಮ್ಮಗ ತನಗಿರುವ ಕಾಯಿಲೆ ಹುಷಾರಾಗಲಿ ಎಂದು ತನ್ನ ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಅಜ್ಜ ಅಜ್ಜಿ ಇಬ್ಬರನ್ನು ಕೊಲೆ ಮಾಡಿದ್ದಾನೆ.

ನ.21 ರಂದು ಕೊಳಗಾಮೆ ಗ್ರಾಮದಲ್ಲಿ ಕರಿಬಸವಯ್ಯ (65) ಅವರ ಪತ್ನಿ ಲಲೀತಮ್ಮ (60) ಎಂಬವರ ಕೊಲೆಯಾಗಿತ್ತು. ಇದೀಗ ಮಲ್ಲಂದೂರು ಪೊಲೀಸರು (Police) ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದು, ಆರೋಪಿಯ ಬಾಯಿಯಿಂದ ಕೊಲೆಗೆ ಅಸಲಿ ಕಾರಣ ಏನು ಎಂಬುದನ್ನು ಬಾಯಿ ಬಿಡಿಸಿದ್ದಾರೆ.

ಮೂಲತಃ ನಿಶಾಂತ್ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಮಹಿಳೆಯ ಚಟ ಇತ್ತು. ಆದರೆ ಇತ್ತೀಚೆಗೆ ಆತನ ಮೈನಲ್ಲಿ ಸಾಕಷ್ಟು ಕಜ್ಜಿಗಳಾಗಿದ್ದವು. ಅದಕ್ಕಾಗಿ ಆತನ ಸ್ನೇಹಿತರು, ನೀನು ಮಹಿಳೆಯರ ಬಳಿ ಹೋದಾಗ ಕಾಂಡೋಮ್ ಬಳಸಬೇಡ. ಆಗ ಕಜ್ಜಿ ಹೋಗುತ್ತೆ ಎಂದು ಹೇಳಿದ್ದರಂತೆ. ಅದಕ್ಕೆ ಬೆಂಗಳೂರಿನಲ್ಲಿ ಕಾಂಡೋಮ್ ಹಾಕದೆ ಸೆಕ್ಸ್ ಮಾಡಲು ಮಹಿಳೆಯರು ಒಪ್ಪದ ಕಾರಣ ಅಜ್ಜ-ಅಜ್ಜಿಯ ಮನೆಗೆ ಬಂದಿದ್ದನು.

ಅಲ್ಲಿ ಅಜ್ಜಿಯ ಮೇಲೆ ಅತ್ಯಾಚಾರ ಮಾಡುವುದು ಆತನ ಮೂಲ ಉದ್ದೇಶವಾಗಿತ್ತು. ಹಾಗಾಗಿ, ಮೊದಲಿಗೆ ಅಜ್ಜನನ್ನ ಕಲ್ಲಿನಿಂದ ಚಚ್ಚಿ, ಕೊಲೆ ಮಾಡಿ ನಂತರ ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಅಜ್ಜಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಬಾಯಿಯನ್ನು ಬಿಗಿಯಾಗಿ ಹಿಡಿದಿದ್ದರಿಂದ ಆಕೆಯು ಸಾವನ್ನಪ್ಪಿದ್ದಳು ಎಂದು ತಿಳಿದು ಬಂದಿದೆ.

You may also like

Leave a Comment