Home » CM Siddaramiah : ಉಡುಪಿ ಪೇಜಾವರ ಶ್ರೀ ಈ ರೀತಿಯ ಮನಸ್ಥಿತಿ ಇರುವವವರು – ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ

CM Siddaramiah : ಉಡುಪಿ ಪೇಜಾವರ ಶ್ರೀ ಈ ರೀತಿಯ ಮನಸ್ಥಿತಿ ಇರುವವವರು – ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ

0 comments

CM Siddaramiah : ಇತ್ತೀಚೆಗೆ ಉಡುಪಿಯ ಪೇಜಾವರ ಶ್ರೀಗಳು ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡಿದ್ದು, ಸಂವಿಧಾನ ರಕ್ಷಿಸುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ(CM Siddaramiah)ಅವರು ಶ್ರೀಗಳ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸಂವಿಧಾನ ಜಾರಿ ದಿನಾಚರಣೆಯಲ್ಲಿ ಮಾತನಾಡಿದ ಅವರು ಸಂವಿಧಾನದ ಬಗ್ಗೆ ಉಡುಪಿಯ ಪೇಜಾವರ ಸ್ವಾಮೀಜಿ ಹೇಳಿಕೆ ನೀಡುವ ಅಗತ್ಯವೇನಿತ್ತು? ಅವರು ಮನುಸ್ಮತಿ ಪ್ರತಿಪಾದನೆ ಮಾಡುತ್ತಾರೆ. ಅವರು ಆ ಮನಸ್ಥಿತಿ ಇರುವವರು. ಮೇಲು-ಕೀಳು, ಮೇಲ್ಜಾತಿ-ಕೆಳಜಾತಿ ಎಂಬ ತಾರತಮ್ಯ ಸರಿ ಅಲ್ಲ. ಇಂತಹ ಅಲಿಖೀತ ಸಂವಿಧಾನವನ್ನು ನಾವು ಒಪ್ಪಿಕೊಂಡುಬಿಟ್ಟಿದ್ದೇವೆ. ಇದನ್ನು ಪ್ರತಿಪಾದಿಸುವುದೇ ಮನುಸ್ಮತಿ. ಇದನ್ನು ಪ್ರಚುರಪಡಿಸುವವರೇ ಆರೆಸ್ಸೆಸ್‌ ಮತ್ತು ಬಿಜೆಪಿ ಎಂದಿದ್ದಾರೆ.

You may also like

Leave a Comment