Home » Karkala: ಗೆಲ್ಲು ಕಡಿಯಲು ಮರವೇರಿದ ವ್ಯಕ್ತಿ – ಆಯ ತಪ್ಪಿ ಬಿದ್ದು ಸಾವು

Karkala: ಗೆಲ್ಲು ಕಡಿಯಲು ಮರವೇರಿದ ವ್ಯಕ್ತಿ – ಆಯ ತಪ್ಪಿ ಬಿದ್ದು ಸಾವು

0 comments

Karkala : ಮರದ ಗೆಲ್ಲು ಕಡಿಯಲು ಮರವೇರಿದಂತಹ ವ್ಯಕ್ತಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಉಡುಪಿ(Udupi) ಜಿಲ್ಲೆಯ ಕಾರ್ಕಳ(Karkala) ಹೆಬ್ರಿಯ ಕಬ್ಬಿನಾಲೆಯಲ್ಲಿ ಹೊನ್ನಕೊಪ್ಪಲ ನಿವಾಸಿ ಜ್ಞಾನೇಶ್ವರ್ ಹೆಬ್ಬಾರ್ (59) ಎಂಬುವವರು ಬುಧವಾರ ಬೆಳಿಗ್ಗೆ ಮನೆಯ ಬಳಿಯಿದ್ದ ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಆಯ ತಪ್ಪಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಜಾಣ ಎಂದೇ ಕರೆಯಲ್ಪಡುತ್ತಿದ್ದ ಇವರು ಮುನಿಯಾಲು ಪಬ್ಲಿಕ್ ಸ್ಕೂಲ್‌ನ ಮಾಜಿ ಅಧ್ಯಕ್ಷರಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

You may also like

Leave a Comment