Home » Arecanut: ಅಡಿಕೆ ಬೆಳೆಗಾರರ ಸಮಸ್ಯೆ ನೀಗಿಸಲು ದೆಹಲಿಗೆ ಹೋದ ಕರಾವಳಿ ಸಂಸದರ ನಿಯೋಗ – ಕೇಂದ್ರ ಕೃಷಿ ಸಚಿವರ ಬಳಿ ಇಟ್ಟ ಬೇಡಿಕೆಗಳೇನು ಗೊತ್ತೇ?

Arecanut: ಅಡಿಕೆ ಬೆಳೆಗಾರರ ಸಮಸ್ಯೆ ನೀಗಿಸಲು ದೆಹಲಿಗೆ ಹೋದ ಕರಾವಳಿ ಸಂಸದರ ನಿಯೋಗ – ಕೇಂದ್ರ ಕೃಷಿ ಸಚಿವರ ಬಳಿ ಇಟ್ಟ ಬೇಡಿಕೆಗಳೇನು ಗೊತ್ತೇ?

0 comments

Arecanut: ಕೇಂದ್ರ ಕೃಷಿ ಸಚಿವರನ್ನು ಭೇಟಿಯಾದ ಕರಾವಳಿ ಸಂಸದರ ನಿಯೋಗದವರ ಮುಂದೆ ಅಡಿಕೆ (Arecanut) ಬೆಳೆಗಾರರ ನೆರವಿಗೆ ಬರಲು ಕೇಂದ್ರ ಸರಕಾರ ಭದ್ಧವಾಗಿದೆ ಎಂದು ಭರವಸೆ ನೀಡಿದೆ.

ಶಿವಮೊಗ್ಗ ಸಂಸದ ರಾಘವೇಂದ್ರ ನೇತ್ರತ್ವದಲ್ಲಿ ಕರಾವಳಿಯ ಸಂಸದರು ನವ ದೆಹಲಿಯ ಕೃಷಿ ಭವನ ದಲ್ಲಿ ಕೇಂದ್ರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಚೌಹಾಣ್ ಭೇಟಿಯಾಗಿ ರಾಜ್ಯದ ಅಡಿಕೆ ಬೆಳೆಗಾರರ ಸಮಸ್ಯೆ ಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಅಂತೆಯೇ ಕರಾವಳಿಯ ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ಅಡಿಕೆ ಬೆಳೆಗಾರರ ನೆರವಿಗೆ ಬರಲು ಕೇಂದ್ರ ಸರಕಾರ ಭದ್ಧವಾಗಿದೆ ಎಂದು ಭರವಸೆ ನೀಡುವ ಜೊತೆಗೆ ಡಿಸೆಂಬರ್ 6 ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶಕ್ಕೆ ಬರುವುದಾಗಿ ಅಶ್ವಾಸನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ, ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ , ಬ್ರಿಜೇಶ್ ಚೌಟ ಹಿರಿಯರಾದ ಹೊಸ ಬಾಲೆ ಮಂಜಪ್ಪ ಮತ್ತಿರರು ಉಪಸ್ಥಿತರಿದ್ದರು.

You may also like

Leave a Comment