Home » Suicide: ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ! ನಾನ್‌ವೆಜ್ ಆಹಾರ ಬಿಡುವಂತೆ ಪ್ರಿಯಕರನ ಕಿರುಕುಳ!

Suicide: ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ! ನಾನ್‌ವೆಜ್ ಆಹಾರ ಬಿಡುವಂತೆ ಪ್ರಿಯಕರನ ಕಿರುಕುಳ!

0 comments

Suicide: ಏರ್ ಇಂಡಿಯಾ ಪೈಲಟ್ ಒಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಸೃಷ್ಟಿ ತುಲಿ (25) ಆತ್ಮಹತ್ಯೆಗೆ ಶರಣದ ಪೈಲಟ್. ಫ್ಲ್ಯಾಟ್‌ವೊಂದರಲ್ಲಿ ಡೇಟಾ ಕೇಬೆಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದುವರೆಗೆ ಆತ್ಮಹತ್ಯೆ (Suicide) ಕುರಿತು ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಆಕೆಯ ಪ್ರಿಯಕರ ಆದಿತ್ಯ ಪಂಡಿತ್‌ನನ್ನು (27) ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೃಷ್ಟಿ ತುಲಿ ಎಂಬಾಕೆಯ ಪ್ರಿಯಕರ ಆದಿತ್ಯ ಪದೇಪದೇ ಸೃಷ್ಟಿಯನ್ನು ಸಾರ್ವಜನಿಕವಾಗಿ ಅವಮಾನಿಸುವುದಲ್ಲದೇ ಆಕೆಯ ಆಹಾರ ಪದ್ಧತಿ ಇಷ್ಟ ಪಡುತ್ತಿರಲಿಲ್ಲ. ಅಲ್ಲದೇ ಮಾಂಸಾಹಾರ ಸೇವನೆ ಬಿಡುವಂತೆ ಆಕೆಯ ಮೇಲೆ ಒತ್ತಡ ಹೇರಿದ್ದ ಎಂದು ಸೃಷ್ಟಿ ಚಿಕ್ಕಪ್ಪ ಆರೋಪಿಸಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ದೊಡ್ಡದಾಗಿ ಜಗಳವಾಗಿತ್ತು ಎಂಬ ವಿಚಾರ ಅವರಿಗೆ ಮೊದಲೇ ತಿಳಿದಿತ್ತು. ಅಲ್ಲದೇ ಈ ವಿಚಾರದಿಂದ ಆಕೆ ಬಹಳ ನೊಂದಿದ್ದು ಈ ನಿರ್ಧಾರಕ್ಕೆ ಕಾರಣ ಎಂದು ಚಿಕ್ಕಪ್ಪನ ಆರೋಪವಾಗಿದೆ.

ಇದೀಗ ಸೋಮವಾರ ಮುಂಜಾನೆ ದೆಹಲಿಗೆ ತೆರಳುತ್ತಿದ್ದ ಪ್ರಿಯಕರ ಆದಿತ್ಯನಿಗೆ ಸೃಷ್ಟಿ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಳು. ಇದನ್ನು ತಿಳಿದ ಆದಿತ್ಯ ತಕ್ಷಣವೇ ಆಕೆ ಇದ್ದ ಫ್ಲ್ಯಾಟ್‌ಗೆ ಬಂದು ನೋಡಿದಾಗ ಬಾಗಿಲು ಲಾಕ್ ಆಗಿತ್ತು. ಈ ವೇಳೆ ನಕಲಿ ಕೀ ತಯಾರಕರನ್ನು ಕರೆಸಿ ಬಾಗಿಲು ತೆಗೆದು ನೋಡಿದಾಗ ಸೃಷ್ಟಿ ಡೇಟಾ ಕೇಬಲ್ ಸಹಾಯದಿಂದ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆಕೆಯನ್ನು ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಆಕೆ ಜೀವ ಹೋಗಿತ್ತು.

You may also like

Leave a Comment