Home » Mysore : ಮಹಿಳೆಯರ ಗಲಾಟೆ ಬಿಡಿಸಿಲು ಹೋದ ವ್ಯಕ್ತಿಯ ಮರ್ಮಾಂಗಕ್ಕೆ ಬಿತ್ತು ಏಟು – ಸ್ಥಳದಲ್ಲೇ ಸಾವು !!

Mysore : ಮಹಿಳೆಯರ ಗಲಾಟೆ ಬಿಡಿಸಿಲು ಹೋದ ವ್ಯಕ್ತಿಯ ಮರ್ಮಾಂಗಕ್ಕೆ ಬಿತ್ತು ಏಟು – ಸ್ಥಳದಲ್ಲೇ ಸಾವು !!

0 comments

Mysore : ಮಹಿಳೆಯರಿಬ್ಬರು ಗಲಾಟೆ ಮಾಡುತ್ತಿರುವುದನ್ನು ನೋಡಿ ಬಿಡುಸಲು ಹೋದ ವ್ಯಕ್ತಿಯೋರ್ವನ ಮರ್ಮಾಂಗಕ್ಕೆ ಪೆಟ್ಟು ಬಿದ್ದು ಸಾವನ್ನಪ್ಪಿದ ಅಘಾತಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು(Mysore )ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ದೊಡ್ಡೇಬಾಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. ರಾಜಮ್ಮ ಮತ್ತು ನಂಜಮ್ಮ ಎಂಬ ಮಹಿಳೆಯರಿಬ್ಬರು ಜಗಳವಾಡುತ್ತಿದ್ದರು. ಈ ಜಗಳವನ್ನು ನೋಡಿದ ಮಹದೇವಸ್ವಾಮಿ ಪತ್ನಿ ಶಶಿಕಲಾ ಜಗಳ ಬಿಡಿಸಲು ಹೋಗಿದ್ದರು. ಆದರೆ ರಾಜಮ್ಮ ಎಂಬ ಮಹಿಳೆ ಶಶಿಕಲಾ ಮೇಲೆಯು ಹಲ್ಲೆ ಮಾಡಿದ್ದಳು. ಪತ್ನಿಯ ಮೇಲೆ ಹಲ್ಲೆಯಾಗುತ್ತಿರುವುದನ್ನು ಗಮನಿಸಿದ ಪತಿ ಮಹದೇವಸ್ವಾಮಿ ಅವರ ನಡುವೆ ಆಗುತ್ತಿದ್ದ ಜಗಳವನ್ನು ಬಿಡಿಸಲು ಹೋಗಿದ್ದನು.

ಆದರೆ ಯಾರಿಗೂ ಬಗ್ಗದ ರಾಜಮ್ಮ ಮಹದೇವಸ್ವಾಮಿಯ ಮೇಲೂ ಹಲ್ಲೆ ಮಾಡಿದ್ದಳು. ಈ ವೇಳೆ ಮರ್ಮಾಂಗಕ್ಕೆ ಏಟುಬಿದ್ದ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ದೊರೆತಿದೆ. ಸಧ್ಯ ಟಿ. ನರಸಿಂಹ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment