Home » Davanagere: ಬೋರ್ ಆನ್ ಮಾಡುತ್ತಿದ್ದಂತೆ ಹೊತ್ತಿದ ಬೆಂಕಿ- ಸುಟ್ಟು ಕಾರಕಲಾದ ಅಡಿಕೆ ತೋಟ!

Davanagere: ಬೋರ್ ಆನ್ ಮಾಡುತ್ತಿದ್ದಂತೆ ಹೊತ್ತಿದ ಬೆಂಕಿ- ಸುಟ್ಟು ಕಾರಕಲಾದ ಅಡಿಕೆ ತೋಟ!

4 comments

Davanagere: ದಾವಣಗೆರೆಯ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿಯಲ್ಲಿ ವಿದ್ಯುತ್ ಅವಘಡಕ್ಕೆ ಒಂದೂವರೆ ಎಕರೆ ಅಡಿಕೆ ತೋಟ ಸುಟ್ಟು ಕರಕಲಾದ ಘಟನೆ ಜರುಗಿದೆ.

ಹೌದು, ದಾವಣಗೆರೆಯಲ್ಲಿ(Davanagere) ಭೀಕರ ಬೆಂಕಿ ಅವಘಡ ಸಂಭವಿಸಿದೆ. ದಾವಣಗೆರೆಯ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿಯಲ್ಲಿ ಜಮೀನಿನಲ್ಲಿದ್ದ ಬೋರ್‌ವೆಲ್ ಆನ್ ಮಾಡಿದ ತಕ್ಷಣ ಬೆಂಕಿ ಕಾಣಿಸಿಕೊಂಡಿದೆ. ಅಡಿಕೆ ತೋಟದಲ್ಲಿ ಕಳೆ ನಾಶಕ ಹೊಡೆದಿದ್ದರಿಂದ ಒಣಗಿದ ಹುಲ್ಲಿಗೆ ಬೆಂಕಿ ತಗುಲಿದೆ. ನೋಡನೋಡುತ್ತಿದ್ದಂತೆಯೇ ಬೆಳೆದು ನಿಂತ ಅಡಿಕೆ ತೋಟ ಸಂಪೂರ್ಣ ಸುಟ್ಟು ಹೋಗಿದೆ.

ರೈತ ಬಸವನಗೌಡ ಹಾಗೂ ಶಾಂತಮ್ಮ ಎಂಬವರಿಗೆ ಸೇರಿದ 650 ಅಡಿಕೆ ಗಿಡಗಳು ಸಂಪೂರ್ಣ ನಾಶವಾಗಿದೆ. ಬರಗಾಲದಲ್ಲಿ ರೈತರು ಟ್ಯಾಂಕರ್‌ನಿಂದ ನೀರು ತಂದು ಅಡಿಕೆ ಗಿಡಗಳನ್ನು ರಕ್ಷಣೆ ಮಾಡಿದ್ದರು. ಈಗ ಏಕಾಏಕಿ ಸುಟ್ಟು ಕರಕಲಾದ ಹಿನ್ನೆಲೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬೆಸ್ಕಾಂನಿಂದ ರೈತರಿಗೆ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ನಷ್ಟ ಅನುಭವಿಸಿದ ರೈತರಿಗೆ ಶಾಸಕ ಬಿ ದೇವೇಂದ್ರಪ್ಪ ವೈಯಕ್ತಿಕವಾಗಿ 50,000 ಹಣ ನೀಡಿದ್ದಾರೆ.

You may also like

Leave a Comment