Home » Toxic Kannada Movie: ‘ಟಾಕ್ಸಿಕ್‌ʼ ಸಿನಿಮಾ ವಿರುದ್ಧ ಎಫ್‌ಐಆರ್‌ಗೆ ತಡೆ ನೀಡಿದ ಹೈಕೋರ್ಟ್‌

Toxic Kannada Movie: ‘ಟಾಕ್ಸಿಕ್‌ʼ ಸಿನಿಮಾ ವಿರುದ್ಧ ಎಫ್‌ಐಆರ್‌ಗೆ ತಡೆ ನೀಡಿದ ಹೈಕೋರ್ಟ್‌

0 comments

Yash Toxic Film: ಯಶ್‌ ನಟನೆಯ ʼಟಾಕ್ಸಿಕ್‌ʼ ಸಿನಿಮಾದ ನಿರ್ಮಾಪಕರ ವಿರುದ್ಧ ಹಾಕಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ಗೆ ತಡೆ ನೀಡಿದೆ. ಟಾಕ್ಸಿಕ್‌ ಚಿತ್ರತಂಡ ಕಾಯ್ದೆಯನ್ನು ಉಲ್ಲಂಘಿಸಿತ್ತು ಎಂದು ಆರೋಪಿಸಿ ನಿರ್ಮಾಣ ಸಂಸ್ಥೆಗಳಾದ ಕೆವಿಎನ್‌ ಹಾಗೂ ಮಾನ್ಸಸ್ಟರ್‌ ಮೈಂಸ್‌ ವಿರುದ್ಧ ರಾಜ್ಯ ಅರಣ್ಯ ಇಲಾಖೆ ದೂರು ನೀಡಲಾಗಿತ್ತು. ಹೀಗಾಗಿ ದೂರು ಆಧರಿಸಿ ಎಪ್‌ಐಆರ್‌ ದಾಖಲಾಗಿತ್ತು. ಇದೀಗ ಈ ಎಫ್‌ಐಆರ್‌ಗೆ ಹೈಕೋರ್ಟ್‌ಗೆ ತಡೆ ನೀಡಿದೆ.

ಟಾಕ್ಸಿಕ್‌ ಸಿನಿಮಾ ಸೆಟನ್ನು ಬೆಂಗಳೂರಿನ ಹೊರವಲಯದಲ್ಲಿರುವ ಎಚ್‌ಎಂಟಿಯ ಮೈದಾನದಲ್ಲಿ ನಿರ್ಮಾಣ ಮಾಡಲಾಗಿತ್ತು. ಬೃಹತ್‌ ಸೆಟನ್ನು ಇಲ್ಲಿ ಮಾಡಲಾಗಿತ್ತು. ಆದರೆ ಇದಕ್ಕಾಗಿ ಮೈದಾನದಲ್ಲಿದ್ದ ಮರಗಳನ್ನು ಅಕ್ರಮವಾಗಿ ಯಾವುದೇ ಪೂರ್ವಾನುಮತಿ ಇಲ್ಲದೆ ಕಡಿಯಲಾಗಿದೆ ಎಂದು ಅರಣ್ಯ ಇಲಾಖೆ ಆರೋಪ ಮಾಡಲಾಗಿತ್ತು. ಈ ಕುರಿತು ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದ್ದರು.

ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆಯವರು ಕೂಡಾ ಸಿನಿಮಾ ಸೆಟ್‌ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ನಂತರ ಈ ಕುರಿತು ಸ್ಯಾಟಲೈಟ್‌ ಚಿತ್ರಗಳನ್ನು ಬಿಡುಗಡೆ ಮಾಡಿ ಮಾಧ್ಯಮಕ್ಕೆ ತೋರಿಸಿದ್ದರು. ಇದರ ನಂತರ ಚಿತ್ರತಂಡ ಮರಗಳನ್ನು ತಾವು ಕಡಿದಿಲ್ಲ, ಮೈದಾನದಲ್ಲಿದ್ದ ಗಿಡಗಂಟೆಗಳನ್ನಷ್ಟೇ ನಾವು ಸ್ವಚ್ಛ ಮಾಡಿದ್ದು ಎಂದು ಹೇಳಿಕೊಂಡಿತ್ತು.

ಎಚ್‌ಎಂಟಿ ಸರಕಾರ ನೀಡಿರುವ ಭೂಮಿಯನ್ನು ಸಿನಿಮಾ ಚಿತ್ರೀಕರಣಗಳಿಗೆ ನೀಡಿ ಹಣ ಮಡುತ್ತಿರುವ ಕುರಿತು ಆರೋಪಗಳು ಕೇಳಿ ಬಂದಿತ್ತು. ಇದಕ್ಕೆ ಎಚ್‌ಎಂಟಿ ಸ್ಪಷ್ಟನೆಯನ್ನು ಬಿಡುಗಡೆ ಮಾಡಿತ್ತು. ʼ ಟಾಕ್ಸಿಕ್‌ ಸಿನಿಮಾಕ್ಕೆ ಹಾಕಿರುವ ಸೆಟ್‌ನ ಜಾಗಕ್ಕೂ ತಮಗೂ ಸಂಬಂಧ ಇಲ್ಲʼ ಎಂದು ಹೇಳಿತ್ತು. ಈ ಜಾಗ ಕೆನರಾ ಬ್ಯಾಂಕ್‌ ಸುಪರ್ದಿಯಲ್ಲಿರುವ ಕುರಿತು ವಿಚಾರ ಆಮೇಲೆ ಬೆಳಕಿಗೆ ಬಂತು.

ಇದೀಗ ಸಿನಿಮಾ ನಿರ್ಮಾಪಕರ ಮೇಲೆ ಸಲ್ಲಿಸಲಾಗಿದ್ದ ಎಫ್‌ಐಆರ್‌ಗೆ ಮಧ್ಯಂತರ ತಡೆ ಆಜ್ಞೆ ನೀಡಿದೆ.

You may also like

Leave a Comment