Home » Vinod Raj: ಅಗಲಿದ ಅಮ್ಮನಿಗಾಗಿ ‘ಡಾ. ಲೀಲಾವತಿ ದೇಗುಲ’ ಲೋಕರ್ಪಣೆ ಮಾಡಿದ ಮಗ ವಿನೋದ್ ರಾಜ್ – ಇದರ ವಿಶೇಷತೆ ಕೇಳಿದರೆ ನಿಜಕ್ಕೂ ಹೆಮ್ಮೆ ಪಡ್ತೀರಾ!!

Vinod Raj: ಅಗಲಿದ ಅಮ್ಮನಿಗಾಗಿ ‘ಡಾ. ಲೀಲಾವತಿ ದೇಗುಲ’ ಲೋಕರ್ಪಣೆ ಮಾಡಿದ ಮಗ ವಿನೋದ್ ರಾಜ್ – ಇದರ ವಿಶೇಷತೆ ಕೇಳಿದರೆ ನಿಜಕ್ಕೂ ಹೆಮ್ಮೆ ಪಡ್ತೀರಾ!!

270 comments

Vinod Raj: ಕನ್ನಡದ ನಟ ವಿನೋದ್ ರಾಜ್(Vinod Raj)ಅವರು ತಮ್ಮನ್ನು ಅಗಲಿರುವ ತಾಯಿ ಲೀಲಾವತಿಗಾಗಿ ಭವ್ಯವಾದ ಸ್ಮಾರಕವೊಂದನ್ನು ನಿರ್ಮಾಣ ಮಾಡಿದ್ದಾರೆ. ಇದರ ಉದ್ಘಾಟನೆ ನಿನ್ನೆ (ಡಿಸೆಂಬರ್‌ 5) ನಡೆದಿದೆ. ಇದರ ವಿಶೇಷತೆ ಏನು? ಆದ ಖರ್ಚು ಎಷ್ಟು? ಇಲ್ಲಿದೆ ನೋಡಿ ಡೀಟೇಲ್ಸ್

ಹೌದು, ಕನ್ನಡ ಚಿತ್ರರಂಗದ ವರನಟಿ ಡಾ. ಲೀಲಾವತಿ(Leelavati) ಅಗಲಿ ಒಂದು ವರ್ಷವಾಗುತ್ತಿದೆ. ಕಳೆದ ವರ್ಷ ಡಿಸೆಂಬರ್ 8 ಕ್ಕೆ ಹಿರಿಯ ನಟಿ ಲೀಲಾವತಿ ದೇಹತ್ಯಾಗ ಮಾಡಿದ್ದರು. ಸದಾ ಅಮ್ಮನ ಜೊತೆಯೇ ಇರುತ್ತಿದ್ದ ವಿನೋದ್ ರಾಜ್ ಅವರ ನೆನಪಿನಲ್ಲಿಯೇ ಕಾಲ ಕಳೆಯುವಂತಾಗಿತ್ತು. ಅಮ್ಮನ ಅಗಲಿಕೆ ಬಳಿಕ ಅವರಿಗಾಗಿ ಸ್ಮಾರಕ ನಿರ್ಮಾಣ ಮಾಡಬೇಕು ಅನ್ನೋದು ಆಸೆಯಿತ್ತು. ಅದರಂತೆ ಸೋಲದೇವನಹಳ್ಳಿಯಲ್ಲಿ ವಿನೋದ್ ರಾಜ್ ಅವರು ಲೀಲಾವತಿಗಾಗಿ ಭವ್ಯವಾದ ಸ್ಮಾರಕವೊಂದನ್ನು ನಿರ್ಮಾಣ ಮಾಡಿದ್ದಾರೆ. ಇದರ ಉದ್ಘಾಟನೆ ನಿನ್ನೆ (ಡಿಸೆಂಬರ್‌ 5) ನಡೆದಿದೆ. ಇದಕ್ಕೆ ವರನಟಿ ಡಾ.ಎಂ.ಲೀಲಾವತಿ ದೇಗುಲ ಎಂದು ಹೆಸರಿಟ್ಟಿದ್ದಾರೆ.

ಅಂದಹಾಗೆ ತಾಯಿ ಆಸೆಯಂತೆಯೇ ಸೋಲದೇವನಹಳ್ಳಿ ಭಾಗದ ಜನರಿಗೆ ಡಾ.ಲೀಲಾವತಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಜೊತೆಗೆ ಜಾನುವಾರುಗಳಿಗೆ ಪಶು ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದ್ದರು. ಸೋಲದೇವನಹಳ್ಳಿ ಭಾಗದ ರೈತರು, ಕಲಾವಿದರ ಅನೇಕ ಸಂಕಷ್ಟಗಳಿಗೆ ಧ್ವನಿಯಾಗಿ ಕೆಲಸ ಮಾಡುವ ಜೊತೆಗೆ ಸೋಲದೇವನಹಳ್ಳಿಯಲ್ಲಿ ತಾಯಿ ಲೀಲಾವತಿ ದೇಗುಲ ನಿರ್ಮಿಸಿ ಗಮನ ಸೆಳೆದಿದ್ದಾರೆ.

ಸ್ಮಾರಕ ವಿಷೇಶತೆ :
ಈ ಸ್ಮಾರಕವನ್ನು ಸಂಪೂರ್ಣವಾಗಿ ಅಮೃತ ಶಿಲೆ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಸುತ್ತಲೂ ಬೃಹತ್​ ಕಲ್ಲಿನ ಕಂಬಗಳಿಂದ ಮಂಟಪ ನಿರ್ಮಾಣ ಮಾಡಲಾಗಿದೆ. ಮಂಟಪವನ್ನು ಹೋಲುವ ಹಾಗೆ ಸಮಾಧಿ ಸುತ್ತಲೂ ಕಲ್ಲಿನ ಕಂಬಗಳು ಮಂಟಪಕ್ಕೆ ಮೆರುಗನ್ನು ನೀಡಿದೆ. ಸ್ಮಾರಕ ಉದ್ಘಾಟನೆ ಬಳಿಕ ಅಭಿಮಾನಿಗಳಿಗೆ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಲೀಲಾವತಿಯರವ ಸ್ಮಾರಕ ನೋಡುವುದಕ್ಕೆ ಮೂರು ಪ್ರದಕ್ಷಿಣೆ ಹಾಕಿ ಒಳಗೆ ಹೋಗಬೇಕು. ಈ ವೇಳೆ ಲೀಲಾವತಿಯ ಬಲು ಅಪರೂಪದ ಫೋಟೊಗಳನ್ನು ಕಾಣಬಹುದು. ಸುಮಾರು 60ಕ್ಕೂ ಅಧಿಕ ಫೋಟೊಗಳು ಈ ವೇಳೆ ಕಣ್ಣಿಗೆ ಬೀಳುತ್ತವೆ. ಒಳಗೆ ಪ್ರವೇಶ ಮಾಡುತ್ತಿದ್ದಂತೆ ದೇಗುಲದ ಅನುಭವ ಬರುವಂತೆಯೇ ವಿನ್ಯಾಸ ಮಾಡಲಾಗಿದೆ. ಜೊತೆಗೆ ಪ್ರಕೃತಿಯ ಸೌಂದರ್ಯವನ್ನು ಅನುಭವಿಸಬಹುದು.

ಕೋಟಿ ರೂಪಾಯಿ ವೆಚ್ಚ..
ನೆಲಮಂಗಲದ ಸೋಲದೇವನಹಳ್ಳಿಯ ಒಂದು ಎಕರೆ ಜಾಗದಲ್ಲಿ ಡಾ. ಲೀಲಾವರಿ ಅವರ ದೇಗುಲ ನಿರ್ಮಾಣ ಮಾಡಲಾಗಿದೆ. ಅಂತ್ಯಕ್ರಿಯೆ ಮಾಡಿದ ಜಾಗವೇ ಗರ್ಭಗುಡಿ. ದೇವಾಲಯದ ಒಳಗೆ ಕಲಾತ್ಮಕ ಚಿತ್ರಸಂಪುಟಗಳನ್ನ ಇಡಲಾಗಿದೆ. 62 ಚಿತ್ರಪಟಗಳನ್ನ ಅಳವಡಿಸಲಾಗಿದೆ. ಲೀಲಾವತಿ ಅಮ್ಮನವರ ಆಸೆಯಂತೆ ಒಂದು ಚಿಕ್ಕ ರಂಗಮಂದಿರವನ್ನೂ ನಿರ್ಮಿಸಲಾಗಿದೆ. ಈ ಭವ್ಯವಾದ ದೇಗುಲವನ್ನ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ..

ಅಲ್ಲದೆ ಇಲ್ಲಿಗೆ ಬರುವವರಿಗೆ ಪ್ರತಿದಿನ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಇದೇ ವೇಳೆ ಕನ್ನಡ ಚಿತ್ರತಂಡ 10 ಮಂದಿ ಚಿತ್ರರಂಗದ ಹಿರಿಯರಿಗೆ ನಗದು ಸನ್ಮಾನ ಮಾಡಲಾಗಿದೆ. ಇದನ್ನೂ ಪ್ರತಿ ವರ್ಷ ಮುನ್ನಡೆಸಿಕೊಂಡು ಹೋಗಲು ವಿನೋದ್ ರಾಜ್ ನಿರ್ಧರಿಸಿದ್ದಾರೆ. ಅಲ್ಲದೆ ಬೆಳಗ್ಗೆ 10ರಿಂದ ಸಂಜೆ 4ಗಂಟೆವರೆಗೆ ದೇಗುಲ ತೆರೆದೇ ಇರುತ್ತದೆ. ಇಲ್ಲಿ ಅಡುಗೆ ಮನೆ ಇದೆ, ಹಾಗೇ ಉಳಿಯಲು ಇಚ್ಛಿಸುವವರಿಗಾಗಿ ಎರಡು ಕೊಠಡಿಗಳನ್ನ ನಿರ್ಮಿಸಲಾಗಿದೆ. ಶೀಘ್ರದಲ್ಲೇ ಇಲ್ಲೊಂದು ಉದ್ಯಾನವನವೂ ನಿರ್ಮಾಣಗೊಳ್ಳಲಿದೆ.

You may also like

Leave a Comment