Home » Murder: ಪೊಲೀಸ್ ಮಾಹಿತಿದಾರರೆಂದು ಶಂಕಿಸಿ ಅಂಗನವಾಡಿ ಸಹಾಯಕಿಯನ್ನು ಕೊಂದ ನಕ್ಸಲರು !!

Murder: ಪೊಲೀಸ್ ಮಾಹಿತಿದಾರರೆಂದು ಶಂಕಿಸಿ ಅಂಗನವಾಡಿ ಸಹಾಯಕಿಯನ್ನು ಕೊಂದ ನಕ್ಸಲರು !!

0 comments

Murder: ಮಹಿಳಾ ಅಂಗನವಾಡಿ ಸಹಾಯಕಿಯನ್ನು, ಪೊಲೀಸ್ ಮಾಹಿತಿದಾರರೆಂಬ ಶಂಕೆಯ ಮೇಲೆ ನಕ್ಸಲೀಯರು ಹತ್ಯೆಗೈದಿರುವ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬಸಗೂಡ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಘಟನೆಯನ್ನು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೌದು, ತಿಮ್ಮಾಪುರ ಗ್ರಾಮದ ಲಕ್ಷ್ಮೀ ಪದಂ (45) ಎಂಬುವರ ಮನೆಗೆ ನುಗ್ಗಿದ ಅಪರಿಚಿತ ನಕ್ಸಲೀಯರು ಮನೆಯವರ ಎದುರೇ ಕತ್ತು ಹಿಸುಕಿ ಹತ್ಯೆ (Murder) ಮಾಡಿದ್ದಾರೆ. ಬಳಿಕ ಶವವನ್ನು ಮನೆಯ ಅಂಗಳದಲ್ಲಿ ಎಸೆದು ಪರಾರಿಯಾಗಿದ್ದಾರೆ. ಕೂಡಲೇ ಈ ಬಗ್ಗೆ ಮಾಹಿತಿ ನೀಡಿದ ನಂತರ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಸ್ಥಳದಲ್ಲಿ ಮಾವೋವಾದಿಗಳ ಮದ್ದೇಡ್ ಪ್ರದೇಶ ಸಮಿತಿಯ ಕರಪತ್ರ ಪತ್ತೆಯಾಗಿದ್ದು, ಅದರಲ್ಲಿ ಪೊಲೀಸ್ ಮಾಹಿತಿದಾರರಂತೆ ಮಹಿಳೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ದಾಳಿಕೋರರನ್ನು ಪತ್ತೆಹಚ್ಚಲು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಘಟನೆಯೊಂದಿಗೆ, ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದ ವಿವಿಧ ಕಡೆಗಳಲ್ಲಿ ಈ ವರ್ಷ ಇದುವರೆಗೆ 60 ಕ್ಕೂ ಹೆಚ್ಚು ಜನರನ್ನು ನಕ್ಸಲೀಯರು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment