Maja Talkies : ಕನ್ನಡದಲ್ಲಿ ಹಲವು ನಕ್ಕು ನಗಿಸುವಂತಹ ಕಾರ್ಯಕ್ರಮಗಳು, ಫ್ಯಾಮಿಲಿ ಶೋಗಳು, ರಿಯಾಲಿಟಿ ಶೋಗಳು ಬಂದಿವೆ. ಬರುತ್ತಲೂ ಇವೆ. ಆದರೆ ಕನ್ನಡದ ನಂಬರ್ ಒನ್ ಕಾಮಿಡಿ ಶೋ ಎನಿಸಿದ, ಎವರ್ಗ್ರೀನ್ ಆಗಿರುವ ಮಜಾ ಟಾಕೀಸ್(Maja Talkies ) ಲೆವಲ್ ಅನ್ನು ಮೀರಿಸುವಂತಹ ಯಾವ ಶೋಗಳು ಕೂಡ ಇದುವರೆಗೂ ಬಂದಿಲ್ಲ. ಬಹುಶ ಬರುವುದು ಇಲ್ಲ. ಸುಮಾರು ದಶಕದ ಸಮಯ ಕನ್ನಡ ನಾಡಿನ ಜನರನ್ನು ನಕ್ಕು ನಗಿಸಿ ಎಲ್ಲರ ಮನೆ ಮಾತಾಗಿದ್ದ ಈ ಶೋ ಒಂದೆರಡು ವರ್ಷಗಳಿಂದ ಕಾರಣಾಂತರಗಳಿಂದ ಪ್ರಸಾರವಾಗಿರಲಿಲ್ಲ. ಆದರೆ ಈಗ ನಾಡಿನ ಜನತೆಗೆ ಭರ್ಜರಿ ಗುಡ್ ನ್ಯೂಸ್ ಒಂದು ಸಿಕ್ಕಿದ್ದು, ಈ ಮಜಾ ಟಾಕೀಸ್ ಶೋ ಮತ್ತೆ ಆರಂಭಗೊಳ್ಳಲಿದೆ. ಮತ್ತೆ ಸೃಜನ್ ಲೋಕೇಶ್(Srujan Lokesh )ಹಾಗೂ ಅವರ ತಂಡದವರು ನಿಮ್ಮನ್ನು ನಕ್ಕು ನಗಿಸಲು ಬರ್ತಾ ಇದ್ದಾರೆ.
ಹೌದು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಸೃಜನ್ ಲೋಕೇಶ್ ಅವರ ನೇತೃತ್ವದ ಮಜಾ ಟಾಕೀಸ್ ಎಂದರೆ ನಾಡಿನ ಜನರಿಗೆ ಬಹಳ ಅಚ್ಚು ಮೆಚ್ಚು. ರಾತ್ರಿ ವೇಳೆ ಆ ಶೋ ನೋಡಲು ಎಲ್ಲರೂ ಕಾದು ಕುಳಿತುಕೊಳ್ಳುತ್ತಾರೆ. ಕುಟುಂಬ ಸಮೇತರಾಗಿ ಕುಳಿತು ನಕ್ಕು ನಲಿಯುವಂತಹ ಕಾರ್ಯಕ್ರಮ ಇದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಹಣ್ಣು ಮುದುಕರಿಗೂ ಕೂಡ ಈ ಕಾರ್ಯಕ್ರಮವೆಂದರೆ ಬಹಳ ಇಷ್ಟ. ಕಾರ್ಯಕ್ರಮದ ವೇಳೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಸೃಜನ್ ಲೋಕೇಶ್, ಕುರಿ ಪ್ರತಾಪ್, ಮುತ್ತು, ಗುಂಡು ಮಾವ, ರೆಮೋ, ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ, ಪವನ್, ಇಂದ್ರಜಿತ್ ಲಂಕೇಶ್ ಹಾಗೂ ಇತ್ತೀಚಿಗೆ ನಮ್ಮೆಲ್ಲರನ್ನು ಅಗಲಿದ ಖ್ಯಾತ ನಿರೂಪಕಿ ವರಲಕ್ಷ್ಮಿ ಅಲಿಯಾಸ್ ಅಪರ್ಣ ಅವರೆಲ್ಲರನ್ನು ನೋಡುವುದೇ ನಾಡಿನ ಜನತೆಗೆ ಹಿರಿ ಹಿಗ್ಗು. ಅವರ ಒಂದೊಂದು ಮಾತುಗಳು ಕೂಡ ಎಲ್ಲರನ್ನೂ ನಕ್ಕು ನಗಿಸಿ ಹೊಟ್ಟೆ ಹುಣ್ಣಾಗುವಂತೆ ಮಾಡುತ್ತಿತ್ತು.
ಆದರೆ ಕೆಲವು ವರ್ಷಗಳ ಕಾಲ ಈ ಕಾರ್ಯಕ್ರಮ ಪ್ರಸಾರವಾಗಲೇ ಇಲ್ಲ. ಅಂದರೆ ಸೃಜನ್ ಲೋಕೇಶ್ ಅವರು ಬೇರೆ ಬೇರೆ ಶೋಗಳಲ್ಲಿ ಬಿಸಿಯಾಗಿದ್ದರು. ಇದು ನಾಡಿನ ಜನತೆಯ ಬೇಸರಕ್ಕೂ ಒಂದು ರೀತಿ ಕಾರಣವಾಗಿತ್ತು. ಆದರಿಗ ಸಂತಸದ ವಿಚಾರ ಬಂದು ಬಂದಿದೆ. ಕಲರ್ಸ್ ವಾಹಿನಿ ಅದನ್ನು ನೀಡಿದೆ. ಏನೆಂದರೆ ಮತ್ತೆ ಸೃಜನ್ ಲೋಕೇಶ್ ಅವರು ಎಲ್ಲರ ಮನ ಗೆಲ್ಲಲು ಮಜಾ ಟಾಕೀಸ್ ಮೂಲಕ ಬರುತ್ತಿದ್ದಾರೆ.
ಎಸ್.. ಇದಕ್ಕೆ ಕಲರ್ಸ್ ವಾಹಿನಿಯ ಸೋಶಿಯಲ್ ಮೀಡಿಯಾ ಪೇಜ್ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಇನ ಪ್ರಮುಖ ಸಾಕ್ಷಿ. ಈ ಪ್ರೊಮೋದಲ್ಲಿ ಸೃಜನ್ ಲೋಕೇಶ್ ಅವರು ಕಾಣಿಸಿಕೊಂಡು ಶೀಘ್ರದಲ್ಲೇ ಮಜಾ ಟಾಕೀಸ್ ಆರಂಭವಾಗಲಿರುವ ಸುಳಿವನ್ನು ನೀಡಿದ್ದಾರೆ. ಅಲ್ಲದೆ ದಿನದಿಂದ ದಿನಕ್ಕೆ ಹೊಸ ಹೊಸ ಪ್ರೋಮೊಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ವಿಭಿನ್ನವಾದ ಅಂತಹ ಪ್ರೊಮೋಗಳನ್ನು ಅಪ್ಲೋಡ್ ಮಾಡಿ ಸದ್ಯದಲ್ಲಿ ನಾವು ನಿಮ್ಮ ಮುಂದೆ ಬರುತ್ತಿದ್ದೇವೆ ಎಂಬ ಸುಳಿವನ್ನು ಸೃಜನ್ ಲೋಕೇಶ್ ಅವರು ನೀಡಿದ್ದಾರೆ. ಹೀಗಾಗಿ ನಾಡಿನ ಜನ ಮಜಾ ಟಾಕೀಸ್ ಅನ್ನು ನೋಡಿ ನಕ್ಕು ನಲಿಯಲು ಕಾತರರಾಗಿದ್ದಾರೆ.
ಅಂದಹಾಗೆ ಈ ಸಲದ ಹೊಸ ಮಜಾ ಟಾಕೀಸ್ ನಲ್ಲಿ ಸೃಜನ್ ಲೋಕೇಶ್ ಅವರ ಹಳೆಯ ತಂಡವೇ ಇರುತ್ತದೆಯೋ ಅಥವಾ ಹೊಸ ತಂಡವನ್ನು ಸೃಜನ್ ಪರಿಚಯ ಮಾಡಿಕೊಡುತ್ತಾರೋ ಎಂಬುದು ಕುತೂಹಲವಾಗಿದೆ. ಯಾಕೆಂದರೆ ಆ ಶೋನಲ್ಲಿದ್ದ ಎಲ್ಲಾ ಕಲಾವಿದರು ಬೇರೆ ಬೇರೆ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ಮತ್ತೆ ಅವರೆಲ್ಲರನ್ನು ಒಗ್ಗೂಡಿಸಿ ಸೃಜನ್ ಮಜಾ ಟಾಕೀಸ್ ಅನ್ನು ಮುಂದುವರಿಸುತ್ತಾರೆ ಅಥವಾ ತಮ್ಮದೇ ಬೇರೆ ಹೊಸ ತಂಡವನ್ನು ಕಟ್ಟಿ ಹೊಸ ಮುಖಗಳ ಪರಿಚಯ ಮಾಡಿಕೊಡುತ್ತಾರೋ ಎಂಬುದು ಕುತೂಹಲ.
ಇನ್ನು ವಿಷಾದ ಸಂಗತಿ ಎಂದರೆ ಈ ಶೋ ನ ಮತ್ತೊಬ್ಬ ಖ್ಯಾತ ಕಲಾವಿದೆಯಾದ ಅಪರ್ಣ ಅವರು ನಮ್ಮೆಲ್ಲರನ್ನು ಅಗಲಿರುವುದು. ಹೌದು ಖ್ಯಾತ ನಿರೂಪಕಿಯಾಗಿದ್ದ ಅಪರ್ಣ ಅವರು ಮಜಾ ಟಾಕೀಸ್ ನಲ್ಲಿ ಖ್ಯಾತ ಹಾಸ್ಯಗಾರ್ತಿಯಾಗಿ ಕಾಣಿಸಿಕೊಂಡು ತಮ್ಮ ಇನ್ನೊಂದು ವ್ಯಕ್ತಿತ್ವವನ್ನು ನಾಡಿನ ಜನತೆಗೆ ಪರಿಚಯಿಸಿ ಎಲ್ಲರ ಅಚ್ಚುಮೆಚ್ಚು ಎನಿಸಿದ್ದರು. ಅಪರ್ಣ ಎಂದು ಜನ ಅವರನ್ನು ಕರೆಯುವುದರ ಬದಲು ವರಲಕ್ಷ್ಮಿ ಎಂದೇ ಎಲ್ಲರಿಗೂ. ಆದರೆ ಈ ಹೊಸ ಕಾರ್ಯಕ್ರಮದಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣುವುದು ನಿಜಕ್ಕೂ ಬೇಸರವೇ ಸರಿ. ಅಲ್ಲದೆ ಅವರ ಪಾತ್ರವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಏನೇ ಆಗಲಿ ಸೃಜನ್ ಅವರು ಮತ್ತೆ ಕಂ ಬ್ಯಾಕ್ ಆಗಿದ್ದಾರೆ. ನಾವೆಲ್ಲರೂ ನಕ್ಕು ನಲಿಯಲು ಸಿದ್ದರಾಗೋಣ.
