Home » Court: ಜಾಮೀನು ನೀಡಲು 5 ಲಕ್ಷ ರೂ. ಡಿಮ್ಯಾಂಡ್ : ಕೊನೆಗೂ ಜಡ್ಜ್ ರೆಡ್ ಹ್ಯಾಂಡ್ ಆಗಿ ಲಾಕ್!

Court: ಜಾಮೀನು ನೀಡಲು 5 ಲಕ್ಷ ರೂ. ಡಿಮ್ಯಾಂಡ್ : ಕೊನೆಗೂ ಜಡ್ಜ್ ರೆಡ್ ಹ್ಯಾಂಡ್ ಆಗಿ ಲಾಕ್!

0 comments
High Court

Court: ಜಾಮೀನು (Court) ನೀಡುವ ಸಲುವಾಗಿ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಧನಂಜಯ್ ನಿಕಂ ಮತ್ತು ಇತರೆ ಮೂವರನ್ನು ಬಂಧಿಸಲಾಗಿದೆ.

ಹೌದು, ನ್ಯಾಯಾಧೀಶರ ವಿರುದ್ಧ ಲಂಚ ಆರೋಪ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿದೆ. ಸತಾರಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಧನಂಜಯ್ ನಿಕಂ ಅವರ ಪರವಾಗಿ ಕಿಶೋರ್ ಖರತ್ ಮತ್ತು ಆನಂದ್ ಖರತ್ ಅವರು ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿದೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಮ್ಮ ತಂದೆಯವರ ಜಾಮೀನು ಅರ್ಜಿಯನ್ನು ನ್ಯಾಯಾಧೀಶರು ತಡೆ ಹಿಡಿದಿದ್ದಾರೆ. ಖಾಸಗಿ ವ್ಯಕ್ತಿಗಳ ಮೂಲಕ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು.

ಅಂತೆಯೇ ಸತಾರಾ ಹೋಟೆಲ್‌ನಲ್ಲಿ ಬಲೆ ಬೀಸಿ ಪೊಲೀಸರು ನ್ಯಾಯಾಧೀಶರನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.

You may also like

Leave a Comment