8th Pay Commission Update : ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗದ (8ನೇ ಸಿಪಿಸಿ ನವೀಕರಣ) ಜಾರಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸಾಮಾನ್ಯವಾಗಿ ಕೇಂದ್ರ ವೇತನ ಆಯೋಗವನ್ನು ಪ್ರತಿ 10 ವರ್ಷಗಳಿಗೊಮ್ಮೆ ರಚಿಸಲಾಗುತ್ತದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 28 ಫೆಬ್ರವರಿ 2014 ರಂದು ಕೊನೆಯ ಬಾರಿಗೆ 7 ನೇ ವೇತನ ಆಯೋಗವನ್ನು ರಚಿಸಿತು. ಹೀಗಾಗಿ ಸರ್ಕಾರಿ ನೌಕರರು 8ನೇ ವೇತನ ಆಯೋಗ ಜಾರಿಗಾಗಿ ಕಾಯುತ್ತಿದ್ದಾರೆ. ಇದರ ಜಾರಿಯಿಂದ ಸರ್ಕಾರಿ ನೌಕರರ ಮೂಲ ವೇತನ, ಭತ್ಯೆ, ಪಿಂಚಣಿ ಮತ್ತಿತರ ಸೌಲಭ್ಯಗಳಲ್ಲಿ ಹೆಚ್ಚಳವಾಗಲಿದೆ.
ಕೇಂದ್ರ ಸರ್ಕಾರವು ಪ್ರಸ್ತುತ 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆಯೇ?
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು 8ನೇ ಕೇಂದ್ರೀಯ ವೇತನ ಆಯೋಗವನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವನೆಯನ್ನು ಪ್ರಸ್ತುತ ಪರಿಗಣಿಸುತ್ತಿಲ್ಲ. “ಸದ್ಯ, ಕೇಂದ್ರ ಸರ್ಕಾರಿ ನೌಕರರಿಗೆ ಎಂಟನೇ ಕೇಂದ್ರ ವೇತನ ಆಯೋಗವನ್ನು ರಚಿಸಲು ಸರ್ಕಾರದ ಪರಿಗಣನೆಯಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲ” ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಂಸದರಾದ ಜಾವೇದ್ ಅಲಿ ಖಾನ್ ಮತ್ತು ರಾಮ್ ಜಿ ಲಾಲ್ ಸುಮನ್ ಅವರ ಪ್ರಶ್ನೆಗೆ ಚೌಧರಿ ಈ ಉತ್ತರ ನೀಡಿದ್ದಾರೆ. ಕೇಂದ್ರ ಸರ್ಕಾರವು 2025-26ರ ಕೇಂದ್ರ ಬಜೆಟ್ನಲ್ಲಿ ಹೊಸ ವೇತನ ಆಯೋಗದ ಕುರಿತು ಘೋಷಣೆ ಮಾಡಲು ಪರಿಗಣಿಸುತ್ತಿದೆಯೇ ಎಂದು ಅವರು ಕೇಳಿದ್ದರು.
7 ನೇ ವೇತನ ಆಯೋಗವನ್ನು 28 ಫೆಬ್ರವರಿ 2014 ರಂದು ರಚಿಸಲಾಗಿದೆ. 1 ಜನವರಿ 2016 ರಂದು ಜಾರಿಗೆ ಬಂದವು. ಕೇಂದ್ರ ಸರ್ಕಾರವು 2026ರ ಜನವರಿ 1ರಿಂದ 8ನೇ ವೇತನ ಆಯೋಗವನ್ನು ಜಾರಿಗೊಳಿಸಬಹುದು ಎಂದು ಸರ್ಕಾರಿ ನೌಕರರು ಆಶಿಸಿದ್ದಾರೆ.
