Home » Shabarimale: ಕ್ರೈಸ್ತ ಯುವಕನ ಅಯ್ಯಪ್ಪ ಭಕ್ತಿ; 18ನೇ ಬಾರಿ ಶಬರಿಮಲೆ ಯಾತ್ರೆ

Shabarimale: ಕ್ರೈಸ್ತ ಯುವಕನ ಅಯ್ಯಪ್ಪ ಭಕ್ತಿ; 18ನೇ ಬಾರಿ ಶಬರಿಮಲೆ ಯಾತ್ರೆ

1 comment

Shabarimale: ಜಾತಿ ಧರ್ಮ ಹೆಸರಲ್ಲಿ ಸಮಾಜದಲ್ಲಿ ಅಲ್ಲಲ್ಲಿ ಕಚ್ಚಾಟ ಗದ್ದಲ ನಡೆಯುವ ನಡುವೆಯೂ ಸಾಮರಸ್ಯ ಪ್ರತೀಕವಾಗಿ ಇಲ್ಲೊಂದು ವಿಶೇಷ ನಡೆದಿದೆ. ಹೌದು, ಕಾರ್ಕಳ ತಾಲೂಕಿನ ಸಂಕಲಕರಿಯ ಗೋಕುಲನಗರದ ಆಜಿತ್‌ ಸೆರಾವೋ ಎಂಬ ಕ್ರೈಸ್ತ ಯುವಕ ಸತತವಾಗಿ 18 ಬಾರಿ ಮಾಲೆ ಧರಿಸಿದ್ದು, ಇದೀಗ 18 ನೇ ವರ್ಷದ ಶಬರಿಮಲೆ (Shabarimale) ಯಾತ್ರೆಗೆ ತೆರಳಲು ಮುಂದಾಗಿದ್ದಾರೆ.

ಇವರ ಬಗ್ಗೆ ಹೇಳುವುದಾದರೆ ದಿ| ವಿಲಿಯಂ ಸೆರಾವೋ, ದುಲ್ಸಿನ್‌ ಸೆರಾವೋ ದಂಪತಿಯ ಅವಳಿ ಗಂಡು ಮಕ್ಕಳಲ್ಲಿ ಓರ್ವನಾದ ಅಜಿತ್‌ ನದ್ದು ಎಲೆಕ್ಟ್ರಿಕಲ್‌ ವೃತ್ತಿ ಮಾಡುತ್ತಿದ್ದಾರೆ. ಇವರು 18 ವರ್ಷಗಳ ಹಿಂದೆ ಪೊಳಲಿಯ ಗುರುಸ್ವಾಮಿಯೋರ್ವ ರಿಂದ ಪ್ರಭಾವಿತರಾಗಿ ಮಾಲೆ ಧರಿಸಿ ದರು. ಅಜಿತ್‌ ಹಿಂದಿನ 17 ವರ್ಷಗಳಲ್ಲಿ 5 ಬಾರಿ ದಟ್ಟ ಕಾನನ ದಾರಿಯಲ್ಲಿ ಸಾಗಿ ಅಯ್ಯಪ್ಪನ ದರ್ಶನ ಮಾಡಿದರು. ತಂದೆ ತೀರಿಕೊಂಡ ವರ್ಷ ಮಾಲೆ ಧರಿಸಿರಲಿಲ್ಲ.

ಇನ್ನು ತನ್ನ ಈ ಪುಣ್ಯ ಕಾರ್ಯಕ್ಕೆ ಮನೆಯವರು, ನೆರೆಹೊರೆಯವರು ಸಹಿತ ಎಲ್ಲ ಧರ್ಮದವರ ಬೆಂಬಲವಿದೆ. ಅಯ್ಯಪ್ಪನ ಮೇಲಿನ ಅಚಲ ವಿಶ್ವಾಸ ನನ್ನದು. ವ್ರತ ನಿಷ್ಠರಾಗಿ, ವ್ಯಸನ ಮುಕ್ತನಾಗಿ ಬದುಕಲು ಈ ಮಾಲೆ ಪೂರಕ ಎನ್ನುತ್ತಾರೆ ಅಜಿತ್‌ ಸೆರಾವೋ.

You may also like

Leave a Comment