Home » Belthangady: ನದಿಯಲ್ಲಿ ಗೋಣಿ ಚೀಲದಲ್ಲಿ ಗೋವುಗಳ ತಲೆ ಸೇರಿ ತ್ಯಾಜ್ಯ ಪತ್ತೆ

Belthangady: ನದಿಯಲ್ಲಿ ಗೋಣಿ ಚೀಲದಲ್ಲಿ ಗೋವುಗಳ ತಲೆ ಸೇರಿ ತ್ಯಾಜ್ಯ ಪತ್ತೆ

0 comments

Belthangady: ಅಕ್ರಮ ಗೋ ಮಾಂಸ ತುಂಬಿದ ತ್ಯಾಜ್ಯವನ್ನು ಗೋಣಿ ಚೀಲದಲ್ಲಿ ತುಂಬಿಸಿ ಎಸೆದಿರುವ ಸಂಶಯ ವ್ಯಕ್ತವಾಗಿದೆ.

ಡಿ.17 (ಮಂಗಳವಾರ) ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಅನಾರು ಸೇತುವೆ ಬಳಿ ದನದ ತಲೆ ಸೇರಿ ಅವಶೇಷಗಳು ಹನ್ನೊದು ಗೋಣಿಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ಚಾರ್ಮಾಡಿ ಗ್ರಾಮದ ಅನಾರು ಎಂಬಲ್ಲಿ ಸೇತುವೆ ಕೆಳಗೆ ಈ ಘಟನೆ ಕಂಡು ಬಂದಿದೆ. ದನದ ತಲೆ, ಚರ್ಮ, ಇತರ ಅವಶೇಷಗಳು ಗೋಣಿ ಚೀಲದಲ್ಲಿ ತುಂಬಿಸಿಟ್ಟಿರುವುದು ಕಂಡು ಬಂದಿದೆ. ಅಕ್ರಮವಾಗಿ ದನದ ಮಾಂಸ ವ್ಯವಹಾರ ಮಾಡುವವರು ಈ ಕೃತ್ಯ ಎಸಗಿರುವ ಶಂಕಿಸಲಾಗಿದೆ.

ಧರ್ಮ್ಥಳ ಪೊಲೀಸ್‌ ಠಾಣೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ಮಾಡಿದ್ದಾರೆ.

ಈ ಭಾಗದಲ್ಲಿ ತ್ಯಾಜ್ಯ ಎಸೆಯುವ ಕುರಿತು ಅನೇಕ ದೂರುಗಳು ಕೇಳಿ ಬಂದಿದೆ. ಈ ಕುರಿತು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

You may also like

Leave a Comment