Home » Actor Allu Arjun: ಪುಷ್ಪರಾಜ್‌ಗೆ ತಪ್ಪದ ಕಂಟಕ; ಮತ್ತೊಮ್ಮೆ ಜೈಲು ಸೇರುವ ಭಯ; ಕಾಲ್ತುಳಿತ ಕೇಸ್‌ಗೆ ಬಿಗ್‌ ಟ್ವಿಸ್ಟ್‌

Actor Allu Arjun: ಪುಷ್ಪರಾಜ್‌ಗೆ ತಪ್ಪದ ಕಂಟಕ; ಮತ್ತೊಮ್ಮೆ ಜೈಲು ಸೇರುವ ಭಯ; ಕಾಲ್ತುಳಿತ ಕೇಸ್‌ಗೆ ಬಿಗ್‌ ಟ್ವಿಸ್ಟ್‌

0 comments

Actor Allu Arjun: ಅಲ್ಲು ಅರ್ಜುನ್‌ ಇತ್ತೀಚೆಗೆ ತಮ್ಮ ಪುಷ್ಪ 2 ಸಿನಿಮಾ ನೋಡಲೆಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದೀಗ ಬಿಗ್‌ ಟ್ವಿಸ್ಟೊಂದನ್ನು ನೀಡಿದ್ದಾರೆ. ಈ ಕೇಸಲ್ಲಿ ಅಲ್ಲು ಅರ್ಜುನ್‌ಗೆ ಜೈಲು ದರ್ಶನ ತೋರಿಸಿದ್ದ ಪೊಲೀಸರು, ಇದೀಗ ಬೇಲ್‌ ರದ್ದು ಮಾಡುವಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಹಾಗಾಗಿ ಅಲ್ಲು ಅರ್ಜುನ್‌ ಮತ್ತೊಮ್ಮೆ ಜೈಲು ಪಾಲಾಗುವ ಸಂಭವ ಇದೆಯೇ? ಕಾದು ನೋಡಬೇಕು.

ಪುಷ್ಪ-2 ಸಿನಿಮಾನ ಯಶಸ್ಸಿನ ಅಲೆಯಲ್ಲಿ ಇದ್ದ ನಟ ಅಲ್ಲು ಅರ್ಜುನ್‌ ಮಧ್ಯಂತರ ಜಾಮೀನು ಪಡೆದು ಹೊರ ಬಂದರೂ ಇದೀಗ ಮತ್ತೊಮ್ಮೆ ಜೈಲು ಕಂಬಿ ಎನಿಸುವ ಆತಂಕ ಹೆಚ್ಚಿದೆ. ಇದಕ್ಕೆ ಕಾರಣ ತೆಲಂಗಾಣ ಸರಕಾರ ತೆಗೆದುಕೊಂಡ ಹೆಜ್ಜೆ.

ಚಿಕ್ಕಡಪಲ್ಲಿ ಪೊಲೀಸರು ಸಂಧ್ಯಾ ಥಿಯೇಟರ್‌ಗೆ ಪುಷ್ಪ2 ಚಿತ್ರತಂಡ ಬರಬಾರದು ಎಂದು ಲಿಖಿತವಾಗಿ ಪತ್ರದ ಮೂಲಕ ಪೊಲೀಸರು ಸೂಚಿಸಿದ್ದಾರಂತೆ. ಥಿಯೇಟರ್‌ಗೆ ಪುಷ್ಪ 2 ಚಿತ್ರತಂಡ ಬರಲು ಅನುಮತಿ ನೀಡಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್‌ ಅನುಮತಿಯಿಲ್ಲದೆ ಥಿಯೇಟರ್‌ಗೆ ಬಂದಿದ್ದು ಮಾತ್ರವಲ್ಲ, ಅನುಮತಿ ಇಲ್ಲದೇ ತೆರಳಿದ್ದಾರೆ. ಇದು ಪೊಲೀಸರ ವಾದ.

ಹೈದರಾಬಾದ್‌ ಪೊಲೀಸರು ನಟ ಅಲ್ಲು ಅರ್ಜುನ್‌ಗೆ ನೀಡಿದ ಜಾಮೀನು ರದ್ಧತಿಗೆ ಸುಪ್ರೀಂಕೋರ್ಟ್‌ ಮೆಟ್ಟಿಲೆರಲು ನಿರ್ಧಾರ ಮಾಡಿದ್ದಾರೆ. ಅದಕ್ಕೆ ತೆಲಂಗಾಣ ಸರಕಾರ ಗ್ರೀನ್‌ ಸಿಗ್ನಲ್‌ ನೀಡಿರುವ ಕುರಿತು ವರದಿಯಾಗಿದೆ.

You may also like

Leave a Comment