Coconut Oil: ತಲೆ ಕೂದಲಿಗೆ ಹಚ್ಚಲು ತೆಂಗಿನ ಎಣ್ಣೆಯೇ ದಿ ಬೆಸ್ಟ್. ಕೂದಲು ಉದುರುವಿಕೆ ತಡೆಗಟ್ಟಲು, ದಟ್ಟವಾದ ಕೂದಲನ್ನು ಪಡೆಯಲು ತೆಂಗಿನ ಎಣ್ಣೆ ಪ್ರಮುಖ ಪಾತ್ರ ವಹಿಸುತ್ತದೆ. ಒಟ್ಟಿನಲ್ಲಿ ಕೂದಲ ಎಲ್ಲ ಸಮಸ್ಯೆಗಳಿಗೆ ತೆಂಗಿನ ಎಣ್ಣೆಯ ಪರಿಹಾರ. ಅಲ್ಲದೆ ಕೆಲವೆಡೆ ಅಡುಗೆಗೂ ಕೂಡ ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಕರಾವಳಿ ಭಾಗದ ಜನರು ಅಡುಗೆ ಹಾಗೂ ತಲೆಗೆ ಹಚ್ಚಲು ತೆಂಗಿನ ಎಣ್ಣೆಯನ್ನು ಬಳಸುವುದನ್ನು ನಾವು ನೋಡಿದ್ದೇವೆ. ಆದರಿಗ ಅಚ್ಚರಿ ಎಂಬಂತೆ ಈ ಕುರಿತು ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿದೆ.
ಹೌದು, ಶುದ್ಧ ತೆಂಗಿನ ಎಣ್ಣೆ( coconut oil)ಯನ್ನು ಖಾದ್ಯ ತೈಲ ಎಂದು ವರ್ಗೀಕರಿಸಬೇಕೇ ಅಥವಾ ಸೌಂದರ್ಯವರ್ಧಕಗಳ ಅಡಿಯಲ್ಲಿ ಬರುವ ಕೂದಲಿನ ಎಣ್ಣೆ ಎಂದು ವರ್ಗೀಕರಿಸಬೇಕೇ? ಎಂಬ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಸುಪ್ರಿಂಕೋರ್ಟ್‌ನ ತ್ರಿಸದಸ್ಯ ಪೀಠವು ಅಬಕಾರಿ ಸುಂಕವನ್ನು ವಿಧಿಸುವ 20 ವರ್ಷಗಳ ಹಳೆಯ ಪ್ರಕರಣಕ್ಕೆ ಅಂತ್ಯ ಹಾಡಿದೆ.
ಈ ವಿಚಾರವಾಗಿ ತೀರ್ಪು ನೀಡಿರುವ ನ್ಯಾಯಮೂರ್ತಿ ಕುಮಾರ್, ಶುದ್ಧ ತೆಂಗಿನ ಎಣ್ಣೆಯನ್ನು ಹೇರ್ ಎಣ್ಣೆ ಎಂದು ವರ್ಗೀಕರಿಸಬೇಕು ಎಂಬ ಕಂದಾಯ ಇಲಾಖೆಯ ವಾದವನ್ನು ತಳ್ಳಿಹಾಕಿದರು ಮತ್ತು “ಖಾದ್ಯ ಎಣ್ಣೆ” ಎಂದು ಸಣ್ಣ ಪ್ರಮಾಣದಲ್ಲಿ ಮಾರಾಟವಾಗುವ ಶುದ್ಧ ತೆಂಗಿನ ಎಣ್ಣೆಯನ್ನು ಖಾದ್ಯ ತೈಲ ಎಂದು ವರ್ಗೀಕರಿಸಬಹುದು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ.” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಶುದ್ಧ ತೆಂಗಿನ ಎಣ್ಣೆಯ ವರ್ಗೀಕರಣವು ಅದರ ಬ್ರ್ಯಾಂಡಿಂಗ್ ಅನ್ನು ಅವಲಂಬಿಸಿರುತ್ತದೆ ಎಂದು ನಿರ್ಧರಿಸಿತು. ಖಾದ್ಯ ತೈಲ ಅಥವಾ ಅಡುಗೆಗೆ ಬಳಸುವ ಎಣ್ಣೆ ಎಂದು ಲೇಬಲ್ ಮಾಡಿದರೆ ಮತ್ತು ನಿಯಂತ್ರಿಸಿದರೆ, ಅದು ಸಣ್ಣ ಪ್ಯಾಕೇಜಿಂಗ್‌ನಲ್ಲಿಯೂ ಇದ್ದರೂ ಸಹ ಆ ವರ್ಗದ ಅಡಿಯಲ್ಲಿಯೇ ಬರುತ್ತದೆ. ಚಿಕ್ಕ ಕಂಟೈನರ್‌ಗಳಲ್ಲಿ ಇರುವ ತೆಂಗಿನ ಎಣ್ಣೆಯು ಕೂದಲಿನ ಎಣ್ಣೆ ಎಂದು ಸ್ವಯಂಚಾಲಿತವಾಗಿ ಅರ್ಥೈಸುವ ಕಂದಾಯ ಇಲಾಖೆಯ ವಾದವನ್ನು ನ್ಯಾಯಾಲಯವು ತಿರಸ್ಕರಿಸಿತು. ದಿನ ಬಳಕೆಯ ನಡುವೆ ವ್ಯತ್ಯಾಸವನ್ನು ಗುರುತಿಸಲು ಸ್ಪಷ್ಟವಾದ ಲೇಬಲ್‌ನ ಅಗತ್ಯವನ್ನು ಕೋರ್ಟ್ ಒತ್ತಿಹೇಳಿದೆ.
ಇತರ ನ್ಯಾಯಮೂರ್ತಿಗಳು ಹೇಳಿದ್ದೇನು?
ನವೆಂಬರ್ 2019 ರಲ್ಲಿ ಸಿಜೆಐ ಆಗಿ ನಿವೃತ್ತರಾದ ನ್ಯಾಯಮೂರ್ತಿ ಗೊಗೊಯ್, ಸಣ್ಣ ಪ್ಯಾಕೇಜಿಂಗ್‌ನಲ್ಲಿರುವ ತೆಂಗಿನ ಎಣ್ಣೆಯನ್ನು ಸೂಕ್ತವಾಗಿ ಖಾದ್ಯ ತೈಲ ಎಂದು ವರ್ಗೀಕರಿಸಲಾಗಿದೆ ಎಂದು ಅಭಿಪ್ರಾಯಪಟ್ಟರೆ, ಸಣ್ಣ ಪಾತ್ರೆಗಳಲ್ಲಿ ಪ್ಯಾಕ್ ಮಾಡಿದ ತೆಂಗಿನ ಎಣ್ಣೆಯನ್ನು ಹೇರ್ ಆಯಿಲ್ ಎಂದು ವರ್ಗೀಕರಿಸಬೇಕು ಎಂದು ನ್ಯಾಯಮೂರ್ತಿ ಭಾನುಮತಿ ಅಭಿಪ್ರಾಯಪಟ್ಟಿದ್ದಾರೆ.
ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಆರ್ ಮಹದೇವನ್ ಅವರ ಪೀಠವು ದೇಶದ ವಿವಿಧ ಭಾಗಗಳಲ್ಲಿ ತೆಂಗಿನ ಎಣ್ಣೆಯ ದ್ವಿಗುಣ ಬಳಕೆಯ ಬಗ್ಗೆ ತಿಳಿದಿದೆ. ಆಹಾರ ಸುರಕ್ಷತೆಯ ಅಡಿಯಲ್ಲಿ ಮಾನದಂಡಗಳನ್ನು ಪೂರೈಸಲು ತೈಲವನ್ನು ಖಾದ್ಯ ಎಂದು ಬ್ರಾಂಡ್ ಮಾಡುವುದರ ಮೇಲೆ ವರ್ಗೀಕರಣವು ಅವಲಂಬನೆಗೊಂಡಿದೆ. ಹೇರ್ ಆಯಿಲ್ ಎಂದು ವರ್ಗೀಕರಿಸಲು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಅಡಿಯಲ್ಲಿ ನಿಯಮಗಳು ವಿಭಿನ್ನ ಮಾನದಂಡಕ್ಕೆ ಅನುಗುಣವಾಗಿರುತ್ತವೆ ಎಂದಿದ್ದಾರೆ.
