Home » Mangaluru : ಭೀಕರ ರಸ್ತೆ ಅಪಘಾತ – ಯಕ್ಷಗಾನ ಕಲಾವಿದ ಸಾವು!!

Mangaluru : ಭೀಕರ ರಸ್ತೆ ಅಪಘಾತ – ಯಕ್ಷಗಾನ ಕಲಾವಿದ ಸಾವು!!

by ಹೊಸಕನ್ನಡ
203 comments

Mangaluru : ಭೀಕರ ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದ ವಿಧ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನಪ್ಪಿದ ಘಟನೆ ಮಂಗಳೂರಿನ(Mangaluru) ವಿಟ್ಲದ ಅರ್ಕುಳ(Arkula) ಬಳಿ ನಡೆದಿದೆ.

 

ಮೃತರನ್ನು ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರವೀತ್ ಆಚಾರ್ಯ (22) ಎಂದು ಗುರುತಿಸಲಾಗಿದೆ. ಇವರು ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಸಸಿಹಿತ್ಲು ಭಗವತೀ ಯಕ್ಷಗಾನ ಮೇಳದ ಕಲಾವಿದ ಆಗಿದ್ದರು

 

ಮೇಳದಲ್ಲಿ ಸ್ತ್ರೀವೇಷಧಾರಿಯಾಗಿದ್ದ ಪ್ರವೀತ್‌ ಮಂಗಳವಾರ ಬಜಪೆ ಕಂದಾವರ ಬೈಲಿನಲ್ಲಿ ನಿಗದಿಯಾಗಿದ್ದ ಮೇಳದ ಯಕ್ಷಗಾನಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಅರ್ಕುಳ ಜಂಕ್ಷನ್‌ ಬಳಿ ಬೈಕ್‌ ಸ್ಕಿಡ್‌ ಆಗಿ ರಸ್ತೆಗೆ ಬಿದ್ದಿದ್ದು, ಈ ವೇಳೆ ಐಸ್‌ಕ್ರೀಂ ಸಾಗಿಸುತ್ತಿದ್ದ ವಾಹನ ಪ್ರವೀತ್‌ ಮೇಲೆ ಹರಿದಿದೆ. ಇದರ ಪರಿಣಾಮ ಪ್ರವೀತ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳೂರು ನಗರ ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಸಸಿಹಿತ್ಲು ಮೇಳದ ಈ ಬಾರಿಯ ಪ್ರಮುಖ ಪ್ರಸಂಗ “ಕತೆಗಾರ್ತಿ ಕಲ್ಪನಾ’ದಲ್ಲಿ ಅವರು ಪ್ರಮುಖ ಪಾತ್ರವಾದ “ಕಲ್ಪನಾ’ ಪಾತ್ರ ಮಾಡುತ್ತಿದ್ದರು. ಸುಂಕದಕಟ್ಟೆ ಕಾಲೇಜಿನಲ್ಲಿ ಕಲಿಯುತ್ತಿದ್ದ ವೇಳೆ ಸುಂಕದಕಟ್ಟೆ ಮೇಳದಲ್ಲಿಯೂ ಒಂದು ವರ್ಷ ಪಾತ್ರ ಮಾಡಿದ್ದರು. ಕಾಲೇಜು ಮುಗಿಸಿ ಯಕ್ಷಗಾನದಲ್ಲಿ ಪಾತ್ರ ಮಾಡುವ ಮೂಲಕ ಶಿಕ್ಷಣದ ಜತೆಗೆ ಮನೆಗೂ ನೆರವಾಗುತ್ತಿದ್ದರು.

You may also like

Leave a Comment