Home » Kiccha Sudeep : ಕಿಚ್ಚ ಸುದೀಪ್ ಗೆ ಈ ಖ್ಯಾತ ನಟಿಯೊಂದಿಗೆ ನಡೆದಿತ್ತು 2ನೇ ಮದುವೆ !! ಅಚ್ಚರಿ ಸತ್ಯ ಬಹಿರಂಗ

Kiccha Sudeep : ಕಿಚ್ಚ ಸುದೀಪ್ ಗೆ ಈ ಖ್ಯಾತ ನಟಿಯೊಂದಿಗೆ ನಡೆದಿತ್ತು 2ನೇ ಮದುವೆ !! ಅಚ್ಚರಿ ಸತ್ಯ ಬಹಿರಂಗ

0 comments

Kiccha Sudeep: ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ದಕ್ಷಿಣ ಭಾರತದ ಖ್ಯಾತ ನಟಿಯೊಂದಿಗೆ ಸಂಬಂಧವಿದ್ದು, ಅವರನ್ನು ಕರೆದುಕೊಂಡು ಹೋಗಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದ್ದು, ಈ ಕುರಿತು ಕಿಚ್ಚ ಸುದೀಪ್ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

 

ಹೌದು, ಕಿಚ್ಚ ಸುದೀಪ್(Kiccha Sudeep) ಅವರು ಪ್ರಿಯಾ ಅವರ ಜೊತೆ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರ ಮಧ್ಯೆ ಒಮ್ಮೆ ಮಸ್ತಾಪ ಬಂದಿದ್ದು ನಿಜ. ಆದರೆ, ಅದನ್ನು ಮರೆತು ಇವರು ಮತ್ತೆ ಒಂದಾಗಿದ್ದಾರೆ. ಇವರು ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಒಮ್ಮೆ ಸುದೀಪ್ ಅವರು ಎರಡನೇ ಮದುವೆ ಆದ ಬಗ್ಗೆ ವರದಿ ಆಗಿತ್ತು. ಈ ವಿಚಾರದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಹಲವು ವರ್ಷಗಳ ಬಳಿಕ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ.

 

ಇನ್‌ಸ್ಟಾಗ್ರಾಮ್‌ನಲ್ಲಿ ಮಿರ್ಚಿ ಕನ್ನಡ (mirchi_kannada) ಎಂಬ ಪೇಜ್‌ನಿಂದ ಕಿಚ್ಚ ಸುದೀಪ್ ಅವರನ್ನು ಸಂದರ್ಶನ ಮಾಡಿದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಸಂದರ್ಶಕರು ಸುದೀಪ್ ಅವರಿಗೆ ಇನ್ನೊಂದು ಮದುವೆ ಆಗಿರುವ ಸುದ್ದಿ ಪತ್ರಿಕೆಯಲ್ಲಿ ಪಬ್ಲಿಷ್ ಆಗಿದ್ದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆಗ ಸುದೀಪ್ ‘ಪೇಪರ್​ನಲ್ಲಿ ಒಂದು ಆರ್ಟಿಕಲ್ ಬಂದಿತ್ತು. ಪ್ರಿಯಾ ಜೊತೆ ಕುಳಿತು ಓದುತ್ತಿದ್ದೆ. ಯಾವುದೋ ಹೀರೋ ಎರಡನೇ ಮದುವೆ ಆಗಿದ್ದಾನಂತೆ ಎಂಬ ಸುದ್ದಿ ಅದಾಗಿತ್ತು. ಓದುತ್ತಾ ಹೋದಂತೆ ಕೊನೆಯಲ್ಲಿ ಗೊತ್ತಾಗಿದ್ದು ಅದು ನಾನೇ ಅಂತ. ನಾನು ಹಾಗೂ ಪ್ರಿಯಾ ಇದನ್ನು ನೋಡಿ ನಕ್ಕಿದ್ದೆವು. ನಾನು ಮದುವೆ ಆದ ಹುಡುಗಿ ಇನ್ನು ಮನೆಗೆ ಬರಲೇ ಇಲ್ಲ’ ಎಂದು ಸುದೀಪ್ ಫನ್ ಆಗಿ ಹಳೆಯ ಘಟನೆ ಹೇಳಿದ್ದಾರೆ.

https://www.instagram.com/reel/DD6-ILsSpIN/?igsh=MXYyYnJsMnc0dHBqNQ==

ಕೂಡಲೇ ಪತ್ನಿ ಎದುರಿಗೆ ಪೇಪರ್‌ನಲ್ಲಿ ಸುದ್ದಿ ಬರೆದವರಿಗೆ ಕರೆ ಮಾಡಿದೆ. ಆಗ ಅವರು ಕೂಡ ಸ್ವಲ್ಪ ಹೆದರಿಕೊಂಡಿದ್ದರು. ನೀವು ಪೇಪರ್‌ನಲ್ಲಿ ಬರೆದಿದ್ದೆಲ್ಲವೂ ಓಕೆ, ಆದ್ರೆ ನನ್ನ ಹೆಂಡತಿಯನ್ನು ಮನೆಗೆ ಕಳಿಸಿಕೊಡು ಎಂದು ಕೇಳಿದೆ. ಅಷ್ಟೆಲ್ಲಾ ಮಾಡಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದೀನಿ ಎಂದರೆ ಹೆಂಡತಿ ಮನೆಗೆ ಕಳಿಸಿಕೊಡು ಎಂದು ಜೋರಾಗಿ ಕೇಳಿದೆ. ಅದಕ್ಕೆ ಅವರು ಸಾರಿ ಸರ್.. ಎಂದೆಲ್ಲಾ ಹೇಳಿದರು.

You may also like

Leave a Comment