Arecanut board: ಅಡಿಕೆ ಮಂಡಳಿ ರಚಿಸಬೇಕೆಂಬುದು ನಾಡಿನ ಅಡಿಕೆ ಬೆಳೆಗಾರರ ಆಸೆ. ಈ ಕುರಿತಾಗಿ ಅನೇಕ ಅಡಿಕೆ ಬೆಳೆಗಾರರ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದವು. ಆದರೀಗ ಮಂಡಳಿ ರಚನೆಯ ಬೇಡಿಕೆಯನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕಿದೆ. ಇದು ಈಗಾಗಲೇ ನಿಷೇಧದ ಆತಂಕದಲ್ಲಿರುವ ಅಡಿಕೆ ಬೆಳೆಗಾರರಿಗೆ ಕೇಂದ್ರ ಬಿಜೆಪಿ ಸರ್ಕಾರದ ಈ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗಿದ್ದರೆ ಅಡಿಕೆ ಮಂಡಳಿ(Arecanut board) ಬೇಡ ಎನ್ನಲು ಕೇಂದ್ರ ಕೊಟ್ಟ ಕಾರಣವೇನು?
ಮಂಡಳಿ ಬೇಡ ಎನ್ನಲು ಕಾರಣ?
ಸರ್ಕಾರ ಮಂಡಳಿ ರಚನೆಯ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, ತನ್ನ ನಿರ್ಧಾರಕ್ಕೆ ನೀಡಿರುವ ಕಾರಣ, ಈಗಾಗಲೇ ಅಡಿಕೆ ಬೆಳೆ ಮತ್ತು ಬೆಳೆಗಾರರಿಗೆ ಸಂಬಂಧಿಸಿದಂತೆ ಕ್ಯಾಂಪ್ಕೊ, ಮ್ಯಾಮ್ಕೋಸ್ ಮುಂತಾದ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಕಾಸರಗೋಡಿನ ಅಡಿಕೆ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ, ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದಂತಹ ಸಂಸ್ಥೆಗಳು ಬೆಳೆ ಸಂಶೋಧನೆ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಹಾಗಾಗಿ ಮಾರುಕಟ್ಟೆ ಅಥವಾ ಸಂಶೋಧನೆ ಸೇರಿದಂತೆ ಅಡಿಕೆಗೆ ಪ್ರತ್ಯೇಕ ಮಂಡಳಿಯ ಅಗತ್ಯವಿಲ್ಲ ಎಂದು ಕೇಂದ್ರ ಹೇಳಿದೆ ಎನ್ನಲಾಗಿದೆ.
ಆದರೆ, ವಾಸ್ತವವಾಗಿ ಅಡಿಕೆ ಬೆಳೆ ಮತ್ತು ಬೆಳೆಗಾರರಿಗೆ ಕೇಂದ್ರ ಸರ್ಕಾರ ಉಲ್ಲೇಖಿಸಿರುವ ಈ ಸಂಸ್ಥೆಗಳಿಂದ ನಿಜವಾಗಿಯೂ ಸಕಾಲಿಕ ಮತ್ತು ಸೂಕ್ತ ನೆರವು, ಮಾರ್ಗದರ್ಶನ ಸಿಗುತ್ತಿದೆಯೇ? ಎಂಬ ಪ್ರಶ್ನೆಗೂ ಕೇಂದ್ರದ ಈ ಪ್ರತಿಕ್ರಿಯೆ ಇಂಬು ನೀಡಿದೆ.
